ಗುಲಾಮನ ಸ್ವಾತಂತ್ಯ್ರ ಯಾತ್ರೆ

Author : ಎಂ.ಎಸ್.ಕೆ. ಪ್ರಭು

Pages 102

₹ 60.00




Year of Publication: 2002
Published by: ಮನೋಹರ ಗ್ರಂಥ ಮಾಲಾ
Address: ಸುಭಾಷ್ ಬೀದಿ, ಧಾರವಾಡ

Synopsys

ಖ್ಯಾತ ಕಥೆಗಾರ ಎಂ.ಎಸ್.ಕೆ. ಪ್ರಭು ಅವರ ಅನುವಾದಿತ ನಾಟಕ ಕೃತಿ-ಗುಲಾಮನ ಸ್ವಾತಂತ್ಯ್ರ ಯಾತ್ರೆ. ತೌಫಿಕ್ ಅಲ್ ಹಕೀಮ್ ಅವರು ಬರೆದ ನಾಟಕವನ್ನು ಇವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾವಕ್ಕೆ ಧಕ್ಕೆ ಯಾಗದ ಹಾಗೇ ಭಾಷೆಯ ಸೊಗಡನ್ನು ಉಳಿಸಿಕೊಳ್ಳುವ ಈ ನಾಟಕದ ಸಂಭಾಷಣೆಯು ತುಂಬಾ ಆಕರ್ಷಕ ಹಾgU ಪರಿಣಾಮಕಾರಿಯಾಗಿದೆ. ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಸಂಭಾಷಣೆಗಳ ಆರ್ಥವಂತಿಕೆಗಳು ನಾಟಕದ ಪರಿಣಾಮವನ್ನು ಹೆಚ್ಚಿಸುತ್ತವೆ.

About the Author

ಎಂ.ಎಸ್.ಕೆ. ಪ್ರಭು
(15 July 1938 - 25 January 2000)

ಲೇಖಕ ಎಂ.ಎಸ್.ಕೆ. ಪ್ರಭು ಅವರು (ಮಂದಗೆರೆ ಸೀತಾರಾಮಯ್ಯ ಕೇಶವ ಪ್ರಭು) ಎಂದೇ ಪ್ರಸಿದ್ಧರು. ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ ತಾಲ್ಲೂಕಿನ ಮಂದಗೆರೆ ಗ್ರಾಮದವರು. ತಂದೆ ಸೀತಾರಾಮಯ್ಯ, ತಾಯಿ ಸೀತಮ್ಮ. ಪ್ರಭು ಅವರ ಪ್ರಾಥಮಿಕ ಶಿಕ್ಷಣ ಮಂದಗೆರೆ ಹಾಗೂ ಹೊಳೆನರಸೀಪುರಗಳಲ್ಲಿ, ಪ್ರೌಢಶಿಕ್ಷಣವನ್ನು ಮೈಸೂರಿನಲ್ಲಿ ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಮೊದಲ ದರ್ಜೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬೆಂಗಳೂರಿನ ಅಕೌಂಟೆಂಟ್‌ ಜನರಲ್‌ರವರ ಕಚೇರಿಯಲ್ಲಿ.(1961ರಿಂದ 1977) ಕಾರ್ಯನಿರ್ವಹಿಸಿ, ಯು.ಪಿ.ಎಸ್‌.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಣಾ ಅಧಿಕಾರಿಗಳಾಗಿದ್ದು, ಭದ್ರಾವತಿ, ಧಾರವಾಡ, ಬೆಂಗಳೂರು ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ, 1996ರಲ್ಲಿ ನಿವೃತ್ತರಾದರು. ಹಲವಾರು ಶಬ್ಧ ಚಿತ್ರಗಳನ್ನೂ ನಿರ್ಮಿಸಿದ್ದು ಅವುಗಳಲ್ಲಿ ಐನ್‌ಸ್ಟೀನ್‌ರ ‘ಸಂಸಾರಾಲಯ’ ಮತ್ತು ‘ಅವತಾರ’ ...

READ MORE

Related Books