ಹಿಂದಿಯ ಎರಡು ಪ್ರಸಿದ್ಧ ನಾಟಕಗಳನ್ನು ಕನ್ನಡಕ್ಕೆ ತಂದಿದ್ದಾರೆ ಪ್ರೊ. ಕಾಶಿನಾಥ ಅಂಬಲಗೆ. ಮೊದಲನೆಯದು ಹಿಂದಿಯ ಪ್ರಸಿದ್ಧ ಸಾಹಿತಿ ಭರತೇಂದು ಹರಿಶ್ಚಂದ್ರರ ಮೂಲ ಕೃತಿಯನ್ನು ಆಧರಿಸಿದ 'ಅಂಧೇರ ನಗರಿ'. ನಾಟಕದಲ್ಲಿ ವರ್ತಮಾನದ ಆಡಳಿತ ವ್ಯವಸ್ಥೆಯ ಆಡಳಿತ ವ್ಯವಸ್ಥೆಯ ಅಣಕವಿದೆ. ಇದೊಂದು ಬಗೆಯ ರಾಜಕೀಯ ಪ್ರಹಸನ.
ಹಿಂದಿ ನಾಟಕಾರ ಶರದ್‌ಜೋಶಿ ಅವರ ನಾಟಕ 'ಕುರುಡರ ಆನೆ'. ಅಭಿವೃದ್ಧಿ ಯೋಜನೆಗಳ ಕಪಟತೆ, ಕುಟಿಲತೆಗಳನ್ನು ನಾಟಕ ವಿವರಿಸುತ್ತದೆ. ಕಾರ್ಯಾಂಗದ ಕುರುಡು ಯೋಜನೆಗಳ ಬಗ್ಗೆ ಗಮನ ಸೆಳೆಯುತ್ತವೆ. ಅನುವಾದವೇ ಆದರೂ ಕನ್ನಡದ ಮಣ್ಣಿನ ಗುಣಕ್ಕೆ ನಾಟಕಗಳನ್ನು ಹೊಂದಿಸಿದ್ದಾರೆ ಅಂಬಲಗೆ. ಉತ್ತರ ಕರ್ನಾಟಕ, ಹೈದರಾಬಾದ ಕರ್ನಾಟಕ ಭಾಗದ ಯೋಜನೆಗಳು ಮುಟ್ಟಲಿರುವ ದುರಂತ ಸ್ಥಿತಿಯನ್ನು ನಾಟಕ ಮನವರಿಕೆ ಮಾಡಿಕೊಡುತ್ತದೆ.
©2025 Book Brahma Private Limited.