ಹಿರಿಯ ವಿದ್ವಾಂಸರೂ, ಸಾಹಿತಿಯೂ ಆದ ಬನ್ನಂಜೆ ಗೋವಿಂದಾಚಾರ್ಯರು ಸಂಸ್ಕೃತದಿಂದ ಕನ್ನಡಕ್ಕೆ ಮಾಡಿರುವ ನಾಟಕ ಕೃತಿ ’ಮತ್ತೆ ರಾಮನ ಕತೆ’.
ಮೂಲ ಭವಭೂತಿ ಕವಿಯ ಉತ್ತರ ರಾಮ ಚರಿತಂ ನಾಟಕವನ್ನು ಕನ್ನಡಕ್ಕೆ ತಂದಿರುವ ಬನ್ನಂಜೆಯವರು ಮಹಾವೀರನಾದ ರಾಮನ ಕತೆಯನ್ನು,ಮಹಾವೀರನಾದ ರಾವಣನನ್ನು ಕೊಂದ ಏಕೈಕ ವೀರನ ಕತೆಯನ್ನು ಪ್ರಸ್ತುತ ಪಡಿಸುತ್ತದೆ.
ರಾಮನ ಜೀವನದ ಉತ್ತರಾರ್ಧದ ಕತೆ, ರಾಮಾಯಣದ ಉತ್ತರಕಾಂಡದ ಸೀತಾಪರಿತ್ಯಾಗದ ಕತೆ ’ಉತ್ತರರಾಮಚರಿತೆ’. ಮತ್ತು ಲೋಕೋತ್ತರನಾದ ರಾಮನ ಚರಿತೆಯನ್ನೂ, ಅವನ ಬಾಳಿನ ಉತ್ತರಭಾಗದ ಚರಿತೆ ಕೂಡ ಆಗಿದೆ. ಈ ನಾಟಕದಲ್ಲಿ ಕರುಣಾರಸವನ್ನೇ ಕವಿ ಪ್ರಧಾನವಾಗಿರಿಕೊಂಡಿದ್ದಾನೆ. ಅಷ್ಟೇ ಹಿತವಾಗಿ ಶೃಂಗಾರ ರಸವೂ, ವೀರರಸವೂ ಸೇರಿಕೊಂಡಿದೆ. ರಾಮನ ವಿರಹ ಸೀತಾಗಮನದಿಂದ ಇದ್ದಕ್ಕಿದ್ದಂತೆ ಕರುಣ ಶೃಂಗಾರವಾಗಿ ಬಿಡುವಷ್ಟು ನಾಟಕ ಪ್ರಧಾನವಾಗುತ್ತದೆ.
©2024 Book Brahma Private Limited.