ನೆತ್ತರ ಮದುವೆ

Author : ಬಿ.ಎ. ವಿವೇಕ ರೈ

Pages 88

₹ 50.00




Year of Publication: 2013
Published by: ಅಭಿನವ ಪ್ರಕಾಶನ
Address: ಮುಖ್ಯರಸ್ತೆ, ಮಾರೇನಹಳ್ಳಿ, 17/18-2, 1ನೇ ವಿಜಯನಗರ, ಬೆಂಗಳೂರು -560040
Phone: 9448804905

Synopsys

ಜಗತ್ತಿನ ಅತ್ಯುತ್ತಮ ನಾಟಕಕಾರರಲ್ಲಿ ಒಬ್ಬನಾದ ಫೆಡರಿಕೊ ಗಾರ್ಸಿಯ ಲೊರ್ಕನ ’ಬ್ಲಡ್ ವೆಡ್ಡಿಂಗ್’ ನಾಟಕವನ್ನು ಕನ್ನಡಕ್ಕೆ ’ನೆತ್ತರ ಮದುವೆ’ ಎಂಬ ಶೀರ್ಷಿಕೆಯಡಿ ಲೇಖಕ ಬಿ.ಎ ವಿವೇಕ ರೈ ಅವರು ಅನುವಾದಿಸಿದ್ದಾರೆ.

1936 ರ ದಶಕದಲ್ಲಿ ರಚಿಸಿದ ಈ ನಾಟಕ ಕನ್ನಡ ರೂಪ ಪಡೆದದ್ದು 2013 ರಲ್ಲಿ. ಜೋಗುಳದಲ್ಲಿ ಆರಂಭವಾಗಿ ಮತ್ತೊಂದು ಜೋಗುಳದಲ್ಲಿ ಈ ನಾಟಕ ಮುಗಿಯುವ ಸಮಯಕ್ಕೆ ಊರ ತುಂಬಾ ಹಳೆಯ ಹೆಣಗಳ ವಾಸನೆಯೂ, ಹೊಸ ಮದುವೆಗಳ ಸಂಭ್ರಮಗಳು, ನೋವಿನ ನಡುವೆ ಸುಖವನ್ನು ಅರಸುವ ಮನಸ್ಸುಗಳು ಚಿತ್ರವತ್ತಾಗಿ ತೆರೆದುಕೊಳ್ಳುತ್ತದೆ.  ಎಲ್ಲಾ ಹಿಂಸೆಗಳಲ್ಲೂ ಸಂಕಟ ಅನುಭವಿಸುವವರು ಮಹಿಳೆಯರು ಎಂಬುದನ್ನು ಲೊರ್ಕ ತನ್ನ ನಾಟಕಗಳ ಮೂಲಕ ಹೇಳಿದ್ದಾನೆ.

ಈ ನಾಟಕವು ಒಬ್ಬ ತಾಯಿ, ಒಬ್ಬ ಪ್ರೇಮಿ, ಒಬ್ಬ ಮಡದಿಯ ಸಂಕಟಗಳನ್ನು ಹೇಳುತ್ತದೆ.

About the Author

ಬಿ.ಎ. ವಿವೇಕ ರೈ
(08 December 1946)

ಡಾ. ಬಿ.ಎ.ವಿವೇಕ ರೈ ಸಂಸ್ಕೃತಿ ಚಿಂತಕರು. ಕನ್ನಡ-ತುಳು ಭಾಷೆಯ ಆಂತರಿಕ ಶಕ್ತಿ-ಸಂಪತ್ತನ್ನು ಸಂವರ್ಧಿಸಿದ ವಿದ್ವಾಂಸರು. ಅವರ ಹುಟ್ಟೂರು ಪುತ್ತೂರು ತಾಲೂಕಿನ 'ಪುಣಚಾ'. (ಜನನ: 1946ರ ಡಿಸೆಂಬರ್ 8ರಂದು), ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ, ಮತ್ತೂರಿನಲ್ಲಿ ಪಿಯುಸಿ, ಬಿಎಸ್ಸಿ ವ್ಯಾಸಂಗ, ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರಕೇಂದ್ರ ದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜೊತೆಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾ.ಹಾ.ಮಾ.ನಾಯಕರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ.  ಕನ್ನಡ ಮತ್ತು ತುಳು ಭಾಷೆಯ ಬಗ್ಗೆ ಅಪಾರ ಒಲವು-ಪಾಂಡಿತ್ಯ ಉಳ್ಳವರು. ಭಾಷಾ ಅಧ್ಯಯನದ ಮಾದರಿಗಳನ್ನು ರೂಪಿಸಿದ ವಿದ್ವಾಂಸರು. ಸಂಶೋಧನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ, ರೀಡರ್, ಪ್ರಾಧ್ಯಾಪಕ, ...

READ MORE

Related Books