ಹಿಂದಿ ನಾಟಕಕಾರರಾದ ಪೀಯೋಷ್ ಮಿಶ್ರ ಅವರ ನಾಟಕವನ್ನು ಕನ್ನಡಕ್ಕೆ ’ಆಕಾಶ ಭೇರಿ’ ಎಂಬ ಶೀರ್ಷಿಕೆಯಡಿ ತಂದವರು ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ.
ಭಗತ್ ಸಿಂಗ್ ಮತ್ತು ಅವನ ಅನುಚರರನ್ನು ಕೇಂದ್ರವಾಗಿಟ್ಟುಕೊಂಡು ಭಾರತದ ಸ್ವಾತಂತ್ಯ್ರ ಪ್ರಾಪ್ತಿಯ ಸಂದರ್ಭದಲ್ಲಿ ನಡೆದ ವ್ಯಾಪಕ ಮತ್ತು ವೈವಿಧ್ಯಪೂರ್ಣ ಹೋರಾಟಗಳ ಸರಣಿಯ ಚಿತ್ರಣವನ್ನು ಈ ನಾಟಕ ಕಟ್ಟಿಕೊಡುತ್ತದೆ. ಭಗತ್ ಸಿಂಗನ ಕಥಾನಕಗಳಲ್ಲಿ ಸೂಚಿತವಾದ ಅವನ ಪ್ರೇಯಸಿಯ ಪಾತ್ರ ಇಲ್ಲಿ ವಿಸ್ತಾರಗೊಂಡು ಭಾವನಾತ್ಮಕ ನೆಲೆಯನ್ನು ಸೃಷ್ಟಿಸುತ್ತದೆ. ಭಗತ್ ಸಿಂಗನ ಕನಸಿನ ಭಾರತದ ಪ್ರಸ್ತುತತೆ ಜೊತೆಗೆ ಸಮಕಾಲೀನ ಭಾರತದ ರಾಜಕಾರಣವನ್ನು ಪರಿಶೀಲಿಸಲಾಗಿದೆ.
©2025 Book Brahma Private Limited.