ಟೈಮ್ ಮಶೀನ್

Author : ಸಿದ್ಧಲಿಂಗ ಪಟ್ಟಣಶೆಟ್ಟಿ

Pages 80

₹ 70.00




Year of Publication: 2015
Published by: ಅನನ್ಯ ಪ್ರಕಾಶನ, ಧಾರವಾಡ
Address: 'ಹೂಮನೆ’ , ಶ್ರೀದೇವಿನಗರ, ವಿದ್ಯಾಗಿರಿ ಧಾರವಾಡ 580004
Phone: 08362462718

Synopsys

ಜಿ.ಜೆ ಹರಿಜಿತ್ ರಚಿಸಿದ ಕೊನೆಯ ಮತ್ತು ಮಹತ್ವದ ಹಿಂದಿ ನಾಟಕ "ಟೈಮ್ ಮಶೀನ್". ಮೂಲ ನಾಟಕಕಾರರ ಅಭಿಲಾಷೆಯಂತೆ ಅವರ ನಾಟಕವನ್ನು ಕನ್ನಡಕ್ಕೆ ಅನುವಾದ ಮಾಡಿದವರು ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ. ಈ ನಾಟಕವು ದೇಶಪ್ರೇಮ,  ಧರ್ಮಸಾಮರಸ್ಯ,ಮಾನವೀಯ ಮೌಲ್ಯ, ಅನುಕಂಪ, ಹೀಗೆ ಅನೇಕ ಪ್ರಯೋಗಶೀಲತೆಗಳನ್ನು ಮುಖ್ಯವಾಗಿ ಗಮನದಲ್ಲಿಡುತ್ತದೆ. ಕನ್ನಡ ಸಾಹಿತ್ಯದ ನಾಟಕದ ರಚನೆಗಳಲ್ಲಿಯೇ ವಿಭಿನ್ನ ಬಗೆಯ, ವಸ್ತುಶೈಲಿಯ ಪ್ರಯೋಗಕ್ಕೆ ಈ  ನಾಟಕ ಬಹುಮುಖ್ಯವಾದುದು.  ಕ್ರೌರ್ಯ, ವಂಚನೆಗಳ ಸುತ್ತಲೂ ಹುದುಗಿರುವ ಮಾನವೀಯ ಮೌಲ್ಯ, ಜೀವನ ಪ್ರೀತಿ, ತನ್ನ ದೇಶ ಎನ್ನುವ ಅಭಿಮಾನವೆಲ್ಲವನ್ನೂ ಇದು ಎತ್ತಿ ಹಿಡಿಯುತ್ತದೆ.

About the Author

ಸಿದ್ಧಲಿಂಗ ಪಟ್ಟಣಶೆಟ್ಟಿ
(03 November 1939)

ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು  ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...

READ MORE

Related Books