‘ಮನದ ಮುಂದಣ ಆಸೆ’ ಕೃತಿಯು ಸಂಪಿಗೆ ತೋಟಂದಾರ್ಯ ಅವರ ಷೇಕ್ಸ್ಪಿಯರ್ ಮಹಾಕವಿಯ ಮ್ಯಾಕ್ ಬೆತ್ ನಾಟಕದ ರೂಪಾಂತರವಾಗಿದೆ. ಈ ಕೃತಿಯು ಮನುಷ್ಯನ ಮನಸ್ಸೇ ಆತನ ಒಳಿತು-ಕೆಡುಕುಗಳಿಗೆ ಕಾರಣವೆಂದು ಅಂತಿಮವಾಗಿ ಸತ್ಯದರ್ಶನ ಮಾಡಿಸುವ ನಾಟಕಗಳವು, ಏಕಚಕ್ರಾಧಿಪತ್ಯವನ್ನು ಬಯಸುವ ಸಾಮ್ರಾಜ್ಯ ವಿಸ್ತರಣೆ, ಅದಕ್ಕಾಗಿ ರಕ್ತಪಾತಗಳು - ಇವೆಲ್ಲಾ ಮನುಷ್ಯನ ಸ್ವಾರ್ಥಪರ ಕೆಟ್ಟಯೋಚನೆಗಳು ಅದರಿಂದ ಯಾರೋ ಒಬ್ಬ ರಾಜ ಸುಖ-ಸಂಪತ್ತನ್ನು ಗಳಿಸಿದರೂ ಆಂತರ್ಯದಲ್ಲಿ ಆತ ಸುಖಿ ಅಲ್ಲ, ಮನಸ್ಸಿನ ವಿಕಾರಗಳು, ದುರಾಸೆಗಳು ಎತ್ತರಕ್ಕೇರಿದಷ್ಟೂ ಅಧಃಪತನದ ಕಡೆ ಆತ ಇಳಿಯುತ್ತಿದ್ದಾನೆಂದು ಷೇಕ್ಸ್ಪಿಯರ್‌ನ ದುರಂತ ನಾಟಕಗಳು ನೀತಿಯನ್ನು ಹೇಳುತ್ತವೆ. ಪ್ರಸ್ತುತ ಕೃತಿ 'ಮ್ಯಾಕ್ ಬೆತ್' ನಾಟಕದ ಪುನರ್‌ದರ್ಶನ, ನಮ್ಮಲ್ಲೂ ಮಾನವರು, ದೇವತೆಗಳು, ದಾನವರು ಪುರಾಣಗಳಲ್ಲಿನ ಪಾತ್ರಗಳು. ಹಿಂದೆ ಮೇಳಗಳು ದೊಡ್ಡಾಟ - ಬಯಲಾಟ ಎಂದು ಅಂತಹ ಪ್ರಸಂಗಗಳನ್ನಾಡುತ್ತಿದ್ದರು. ಇಲ್ಲಿಯೂ ಸಹ ಅಬ್ಬರದ ವಿಶೇಷ ಕುಣಿತದ ಪ್ರಕಾರಕ್ಕೆ ತಕ್ಕಂತೆ 'ಮ್ಯಾಕ್ಬೆತ್' ಅನ್ನು ರೂಪಾಂತರಿಸಿ: ಅಣಿಗೊಳಿಸಲಾಗಿದೆ.
(ಹೊಸತು, ಆಗಸ್ಟ್ 2012, ಪುಸ್ತಕದ ಪರಿಚಯ)
ಮಹಾಕವಿ ಷೇಕ್ಸ್‌ಪಿಯರ್‌ನ ನಾಟಕಗಳೆಂದರೆ ಜಗತ್ತಿನಾದ್ಯಂತ ಅದೇನೋ ಸೆಳೆತ, ಆಕರ್ಷಣೆ, ಮೆಚ್ಚುಗೆ ರೂಪಾಂತರಗಳು, ಅನುವಾದಗಳು ಲೆಕ್ಕವಿಲ್ಲದಷ್ಟು ಬಂದಿವೆ. ಮನುಷ್ಯನ ಮನಸ್ಸೇ ಆತನ ಒಳಿತು-ಕೆಡುಕುಗಳಿಗೆ ಕಾರಣವೆಂದು ಅಂತಿಮವಾಗಿ ಸತ್ಯದರ್ಶನ ಮಾಡಿಸುವ ನಾಟಕಗಳವು, ಏಕಚಕ್ರಾಧಿಪತ್ಯವನ್ನು ಬಯಸುವ ಸಾಮ್ರಾಜ್ಯ ವಿಸ್ತರಣೆ, ಅದಕ್ಕಾಗಿ ರಕ್ತಪಾತಗಳು - ಇವೆಲ್ಲಾ ಮನುಷ್ಯನ ಸ್ವಾರ್ಥಪರ ಕೆಟ್ಟಯೋಚನೆಗಳು ಅದರಿಂದ ಯಾರೋ ಒಬ್ಬ ರಾಜ ಸುಖ-ಸಂಪತ್ತನ್ನು ಗಳಿಸಿದರೂ ಆಂತರ್ಯದಲ್ಲಿ ಆತ ಸುಖಿ ಅಲ್ಲ, ಮನಸ್ಸಿನ ವಿಕಾರಗಳು, ದುರಾಸೆಗಳು ಎತ್ತರಕ್ಕೇರಿದಷ್ಟೂ ಅಧಃಪತನದ ಕಡೆ ಆತ ಇಳಿಯುತ್ತಿದ್ದಾನೆಂದು ಷೇಕ್ಸ್ಪಿಯರ್‌ನ ದುರಂತ ನಾಟಕಗಳು ನೀತಿಯನ್ನು ಹೇಳುತ್ತವೆ. ಪ್ರಸ್ತುತ ಕೃತಿ 'ಮ್ಯಾಕ್ ಬೆತ್' ನಾಟಕದ ಪುನರ್‌ದರ್ಶನ, ನಮ್ಮಲ್ಲೂ ಮಾನವರು, ದೇವತೆಗಳು, ದಾನವರು ಪುರಾಣಗಳಲ್ಲಿನ ಪಾತ್ರಗಳು. ಹಿಂದೆ ಮೇಳಗಳು ದೊಡ್ಡಾಟ - ಬಯಲಾಟ ಎಂದು ಅಂತಹ ಪ್ರಸಂಗಗಳನ್ನಾಡುತ್ತಿದ್ದರು. ಇಲ್ಲಿಯೂ ಸಹ ಅಬ್ಬರದ ವಿಶೇಷ ಕುಣಿತದ ಪ್ರಕಾರಕ್ಕೆ ತಕ್ಕಂತೆ 'ಮ್ಯಾಕ್ಬೆತ್' ಅನ್ನು ರೂಪಾಂತರಿಸಿ: ಅಣಿಗೊಳಿಸಲಾಗಿದೆ. ಅಲ್ಲಿನ ಪಾತ್ರಗಳಿಗೆ ಇಲ್ಲಿನ ಉಡುಗೆ-ತೊಡಿಗೆಯ ವೇಷ ಹಾಕಲಾಗಿದೆ. ಹಿಂದ ದೊಡ್ಡಾಟವಾಡಿಸಲು ಊರಿನ ಗಣ್ಯರು - ಅಭಿಮಾನಿಗಳು ಮುಂದೆ ಬಂದಂತೆ ಇದೀಗ ಖ್ಯಾತ ರಂಗ ನಿರ್ದೇಶಕರು ಇದನ್ನು ರಂಗವೇದಿಕೆಗೆ ತರಲು ಮನಸ್ಸು ಮಾಡಬೇಕಾಗಿದೆ. ಲೋಕಕ್ಕೆಲ್ಲ ಇಷ್ಟೊಂದು ನೈತಿಕ ಮೌಲ್ಯಯುತ ಸಂದೇಶಗಳನ್ನು ನಾಟಕಗಳ ಮೂಲಕ ಬಿತ್ತರಿಸಿದರೂ ಶೌರ್ಯ ಇನ್ನೂ ಎಲ್ಲೆಲ್ಲೂ ವಿಜೃಂಭಿಸುತ್ತಿರುವುದೇಕೋ ಅಚ್ಚರಿಯ ವಿಷಯ.
©2024 Book Brahma Private Limited.