ಭಾರತೀಯ ಪತ್ರಕರ್ತ, ಲೇಖಕರಾದ ಖುಷ್ವಂತ್ ಸಿಂಗ್ ಅವರ ಕಾದಂಬರಿ ’ ಟ್ರೈನ್ ಟು ಪಾಕಿಸ್ತಾನ್’. ಭಾರತ ಸ್ವಾತಂತ್ರ್ಯ ಗಳಿಸಿದ ಕಾಲದಲ್ಲೇ ಸಂಭವಿಸಿದಂತಹ ಭೀಕರ ಹಿಂಸಾತ್ಮಕ ಘಟನೆಗಳ ಜೊತೆಯಲ್ಲೇ ಉಕ್ಕುವ ಪ್ರೀತಿಯ ಒರತೆಯನ್ನು, ಸೂಕ್ಷ್ಮವಾಗಿ ಶೋಧಿಸುವ ಈ ಕಾದಂಬರಿ ಕನ್ನಡದ ಮಟ್ಟಿಗೆ, ಹೊಸ ಪ್ರಯೋಗದೊಂದಿಗೆ ರಚನೆಯಾಗಿದೆ. ಹಿಂಸೆ, ಮನುಷ್ಯ ಸಂಬಂಧಗಳ ತೊಳಲಾಟವನ್ನು ನಾಟಕ ರೂಪದಲ್ಲಿ ಕಟ್ಟಿಕೊಟ್ಟವರು ಕನ್ನಡದ ಲೇಖಕ, ಕವಿಯಾದ ಚಿದಾನಂದ ಸಾಲಿಯವರು. ಕನ್ನಡ ನಾಟಕಕ್ಕೆ ಒಂದು ಬಗೆಯ ಹೊಸ ಕಾಣಿಕೆ ಇದು.
ಭಾರತೀಯ ಭಾಷೆಗಳ ಉತ್ತಮ ನಾಟಕಗಳನ್ನು ಕನ್ನಡಿಗರಿಗೆ ಪರಿಚಯಿಸಲು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಶ್ರಮಿಸಿದುದರ ಫಲ ಈ ಕೃತಿ. ಸಂಪಾದಕೀಯ ಜವಾಬ್ದಾರಿ ಹೊತ್ತಿರುವವರು ಡಾ. ನಟರಾಜ್ ಹುಳಿಯಾರ್ ಮತ್ತು ನಟರಾಜ ಹೊನ್ನವಳ್ಳಿ.
©2024 Book Brahma Private Limited.