ಕಾಳಿದಾಸನ ಶಾಕುಂತಲ ಹಾಗೂ ಭವಭೂತಿಯ ಉತ್ತರ ರಾಮಚರಿತೆ ಕೃತಿಗಳಂತೆಯೇ ಶೂದ್ರಕನ ಮೃಚ್ಛಕಟಿಕವೂ ಪ್ರಾಚೀನ ಭಾರತದ ನಾಟಕ ರತ್ನತ್ರಯಗಳಲ್ಲಿ ಪ್ರಮುಖ ಕೃತಿ.
ಒಂದೇ ಸಮನಾದ ಕಾಲದೇಶಾತೀತ ಮಹತ್ವ-ಮೋಹಕತ್ವಗಳನ್ನು ಪಡೆದ ಮತ್ತೊಂದು ಕೃತಿ ಸಂಸ್ಕೃತ ಸಾಹಿತ್ಯದಲ್ಲಿಯೇ ವಿರಳ. ಶಾಕುಂತಲ ನಾಟಕವು ಪದ್ಯಗದ್ಯಮಯವಾದ ನಾಟಕ. ಮೃಚ್ಛಕಟಿಕ ಹಾಗಲ್ಲ. ಇಲ್ಲಿ ಪದ್ಯಗಳಿವೆ. ಆದರೆ, ನಾಟಕ ಕ್ರಿಯೆಯನ್ನು ಮುಂದೆ ಸಾಗಿಸುವ ಗುರಿ ಅವಕ್ಕಿದೆ. ಶೈಲಿಯು ಗದ್ಯದಷ್ಟೇ ಸರಳವಾಗಿದೆ. ಅಷ್ಟೇ ಸರಳಗನ್ನಡದಲ್ಲಿ ಕೆ. ಕೃಷ್ಣಮೂರ್ತಿ ಅವರು ಸಂಸ್ಕೃತದಿಂದ ಕನ್ನಡಕ್ಕೆ ಈ ಕೃತಿಯನ್ನು ಅನುವಾದಿಸಿದ್ದಾರೆ.
©2024 Book Brahma Private Limited.