ಉರ್ದು ಕವಿ ಸಯ್ಯದ್ ಆಗಾ ಹಸನ್ ಅಮಾನತ್ ಲಖನವಿ ರಚಿಸಿರುವ ಈ ನಾಟಕ ಆಧುನಿಕ ಉರ್ದು ಸಾಹಿತ್ಯದ ವಿಶಿಷ್ಟ ಕೃತಿ. ’ಇಂದ್ರಸಭಾ’ ಪ್ರೇಮಕ್ಕಾಗಿ ಹಂಬಲಿಸುವ, ಚಡಪಡಿಸುವ, ದುರಂತ ತಂದುಕೊಳ್ಳುವ, ಸುಖಕ್ಕಾಗಿ ಹಂಬಲಿಸುವ ಬಗ್ಗೆ ಮನಸ್ಥಿತಿಗಳನ್ನು ಬಣ್ಣಿಸುತ್ತದೆ. ಋತು ಚಕ್ರಗಳ ಚಲನೆಗೂ ಮನುಷ್ಯನ ಬದುಕಿಗೂ ಇರುವ ಸಂಕೀರ್ಣ ಸಂಬಂಧಗಳನ್ನೂ ಶೋಧಿಸುವ ಈ ನಾಟಕ ಭಾರತೀಯ ಉರ್ದು ಸಾಹಿತ್ಯದ ಮೊದಲ ಮಹತ್ವದ ನಾಟಕವೆಂದೇ ಪ್ರಖ್ಯಾತವಾಗಿದೆ. ಭಾರತೀಯ ಭಾಷೆಯ ಉತ್ತಮ ನಾಟಕಗಳನ್ನು ಕನ್ನಡಿಗರಿಗೆ ಪರಿಚಯಿಸಲು ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಈ ನಾಟಕವವನ್ನು ಕನ್ನಡ ನಾಟಕಕಾರರು, ಅನುವಾದಕರು, ರಂಗಕರ್ಮಿಗಳು, ಮೂಲ ಭಾಷೆಗಳ ಪರಿಣತರ ಮೂಲಕ ಕನ್ನಡ ಅನುವಾದ ಕಾರ್ಯದಲ್ಲಿ ಹೊರತರಲಾಯಿತು. ಈ ನಾಟಕವನ್ನುಕನ್ನಡೀಕರಿಸಿದ ಬೋಡೆ ರಿಯಾಜ್ ಅಹಮದ್, ಚಿದಾನಂದ ಸಾಲಿ, ವಿಕ್ರಮ ವಿಸಾಜಿಯವರ ಕೆಲಸ ಪುಸ್ತಕ ರೂಪವನ್ನು ಪಡೆದು ಕನ್ನಡ ನಾಟಕ ಪರಂಪರೆಯನ್ನು ಹೆಚ್ಚಿಸಿದೆ.
©2024 Book Brahma Private Limited.