ಹೇಮಾ ಪಟ್ಟಣಶೆಟ್ಟಿ ಅವರ ’ಜಾತಿಯವನೇ ಬೇಕು’ ಕೃತಿ ವಿಜಯ ‘ತೆಂಡುಲಕರ ಅವರ ಪಾಹಿಜೆ ಜಾತೀಜೆ ನಾಟಕದ ಕನ್ನಡಾನುವಾದವಾಗಿದೆ. ಭಾರತೀಯ ಸಮಾಜದಲ್ಲಿ ಪ್ರಚಲಿತವಿರುವ ಅನಿಷ್ಟ ಸಂಪ್ರದಾಯಗಳಾದ ಜಾತಿವಾದ, ಊಳಿಗಮಾನ್ಯ ಪದ್ಧತಿ, ಸ್ವಜನ ಪಕ್ಷಪಾತ, ಪಿತೃಪ್ರಧಾನತೆ ಮತ್ತು ನಮ್ಮ ಶಿಕ್ಷಣವಿಧಾನದ ಅರೆ-ಕೊರೆಗಳ ಮೇಲೆ ಬೆಳಕು ಬೀರುತ್ತದೆ ಹಾಗೂ ಅವುಗಳನ್ನು ಈ ಕೃತಿಯು ವಿಮರ್ಶಿಸುತ್ತದೆ. ಇಲ್ಲಿಯ ಕಥಾನಾಯಕ, ಹೋರಾಳು ಮಹಿಪತ ಬಭ್ರುವಾಹನ ಹಳ್ಳಿಯ ಬಡ ಕುಟುಂಬದಲ್ಲಿ ಹುಟ್ಟಿದ ಕೆಳಜಾತಿಯ ಯುವಕ. ಎಂ.ಎ ಆಗಲೇಬೇಕು ಎಂಬ ಏಕಮಾತ್ರ ಗುರಿ ಹೊಂದಿದವ. ಅದಕ್ಕಾಗಿ ಹಲವು ಸಂಕಷ್ಟ ಎದುರಿಸಿ , ಕೊನೆಗೂ ಎಂ.ಎ ಪಾಸಾಗುತ್ತಾನೆ. ಅಸಂಖ್ಯ ನಕಾರಗಳನ್ನು ಇದಿರುಗೊಳ್ಳುತ್ತಲೇ, ಹೇಳಹೆಸರಿಲ್ಲದ ಹಳ್ಳಿಯ ಕಾಲೇಜೊಂದರಲ್ಲಿ ಪ್ರೊಫೆಸರ್ ಆಗುತ್ತಾನೆ. ಅಲ್ಲಿ ನಿರಂಕುಶ ವಿದ್ಯಾರ್ಥಿಗಳು , ಅಧಿಕಪ್ರಸಂಗಿ ಸಹೋದ್ಯೋಗಿಗಳು, ಪಕ್ಷಪಾತಿ ಆಡಳಿತ ಮುತಾಂಧ ಹೊಸ ಸವಾಲುಗಳಿಗೆ ಅವನು ಮುಖಾಮುಖಿಯಾಗುತ್ತಾನೆ ಎನ್ನುವ ವಿಚಾರಗಳು ಇಲ್ಲಿವೆ. ಕಾಲೇಜು ಕಮಿಟಿಯ ಚೇರಮನ್ ನ ಅಣ್ಣನ ಮಗಳು ಮೇಲುಜಾತಿಯ ನಳಿನಿ, ಅವನ ಸಹೋದ್ಯೋಗಿಯಾಗಿ ಸೇರಿಕೊಂಡಾಗ, ಅವರಿಬ್ಬರ ನಡುವೆ ಪ್ರಣಯ ಅಂಕುರಿಸುತ್ತದೆ. ನಂತರ ಯುವಕ ತನ್ನ ನೌಕರಿ ಉಳಿಸಿಕೊಳ್ಳಲು ಪಡುವ ಪಾಡನ್ನು ವಿಶ್ಲೇಷಿಸಲಾಗಿದೆ.
©2024 Book Brahma Private Limited.