ಡಾ. ಶಂಕರ ಮೊಕಾಶಿ ಪುಣೇಕರ ಅವರ ನಟನಾರಾಯಣಿ ಕಾದಂಬರಿ ಆಧಾರಿತ ನಾಟಕ ‘ಅಭಿನವ ಬೃಹನ್ನಳಾ ವಿಳಾಸ’. ರಂಗಕರ್ಮಿ ನಟರಾಜ್ ಹೊನ್ನವಳ್ಳಿ ಮತ್ತು ಎಚ್.ವಿ. ವೇಣುಗೋಪಾಲ್ ಅವರು ಕಾದಂಬರಿಯನ್ನು ನಾಟಕಕ್ಕೆ ರೂಪಾಂತರಿಸಿದ್ದಾರೆ. ಡಾ. ಶಂಕರ ಮೊಕಾಶಿ ಪುಣೇಕರ ಅವರು ಕನ್ನಡ ಸಾಹಿತ್ಯದ ಬಹಳ ಮುಖ್ಯ ಕಾದಂಬರಿಕಾರರು ಮತ್ತು ಬಹುಮುಖೀ ವ್ಯಕ್ತಿತ್ವದ ಸಾಹಿತಿಗಳು. ಭಾರತೀಯ ಹಾಗೂ ಪಾಶ್ಚಾತ್ಯ ತತ್ವಶಾಸ್ತ್ರದಲ್ಲಿಯ ಬಹುದೊಡ್ಡ ವಿದ್ವಾಂಸರು. ಇಂಗ್ಲಿಷ್ ಮತ್ತು ಕನ್ನಡ-ಕೃತಿಗಳನ್ನು ರಚಿಸಿದ್ದಾರೆ. ಪುಣೇಕರರ ವಿಮರ್ಶೆ ಮತ್ತು ಸಂಗೀತದ ಮೇಲಿನ ಬರಹಗಳು ಕೂಡ ಬಹಳ ಮುಖ್ಯವಾದವು. ಆ ಪೈಕಿ ನಟ ನಾರಾಯಣಿ ಕಾದಂಬರಿ ಪ್ರಮುಖ ಸ್ಥಾನ ಪಡೆದಿದೆ ಎಂದು ರೂಪಾಂತರಕಾರರು ಅಭಿಪ್ರಾಯಪಟ್ಟಿದ್ದಾರೆ.
©2025 Book Brahma Private Limited.