ಇದು ವರ್ತಮಾನ ಕಾಲದಲ್ಲಿ ಭಾರತೀಯ ಸಮಾಜದಲ್ಲಿ ಮಧ್ಯಮವರ್ಗದ ಕುಟುಂಬಗಳು ಎದುರಿಸುತ್ತಿರುವ ಮಾನವೀಯ ಬಿಕ್ಕಟ್ಟುಗಳನ್ನು ಚಿತ್ರಿಸುವ ಕೌಟುಂಬಿಕ ದುರಂತ ನಾಟಕ. ಜಾಗತೀಕರಣದ ಹಿನ್ನೆಲೆಯಲ್ಲಿ ಇಂದಿನ ಕುಟುಂಬ, ವಿವಾಹದಂತಹ ಸಾಮಾಜಿಕ ಸಮಸ್ಯೆಗಳು ನಿಧಾನವಾಗಿ ತಮ್ಮ ಸ್ವರೂಪವನ್ನು ಬದಲಿಸಿಕೊಳ್ಳುವುದನ್ನು, ಮನುಷ್ಯ ಸಂಬಂಧಗಳು ವ್ಯಾವಹಾರಿಕವಾಗುತ್ತಿರುವ ಪರಿ, ಡಾಲರಿನ ಮೋಹದಿಂದಾಗಿ ವಿದೇಶಕ್ಕೆ ಹಾರುವ ಯುವಜನತೆ, ಮುಪ್ಪಿನಲ್ಲಿ ತಬ್ಬಲಿಗಳಾಗುತ್ತಿರುವ ಪೋಷಕರು, ಇಂತಹ ಕುಟುಂಬಗಳನ್ನು ಮೋಸಗೊಳಿಸಿ ಆಸ್ತಿ ಲಪಟಾಯಿಸುವ ಹೊಸ ತಲೆಮಾರಿನ ಯುವಕರು ಹೀಗೆ ಈ ನಾಟಕವು ವರ್ತಮಾನದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ.
©2025 Book Brahma Private Limited.