ಕೊನೆಯ ಉತ್ತರ

Author : ಬಿ. ಸುರೇಶ

Pages 104

₹ 60.00




Year of Publication: 2017
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560137
Phone: 161 - 23183311, 23183312

Synopsys

ಕೊನೆಯ ಉತ್ತರ ಮೂರು ಅಂಕಗಳ ಕಿರುನಾಟಕ. ಈ ನಾಟಕವು ರಾಮ್ನಿಕ್ ಗಾಂಧಿ ಎಂಬ ವ್ಯಾಪಾರಿಯ ಮನೆಯಲ್ಲಿ ಒಂದು ನಡುರಾತ್ರಿ ರಕ್ಷಣೆ ಕೋರಿ ಇಬ್ಬರು ಮುಸ್ಲಿಮ್ ಹುಡುಗರು ಪ್ರವೇಶಿಸುತ್ತಾರೆ. ಅದರೊಂದಿಗೆ ಆ ಬಡಾವಣೆಯಲ್ಲಿ ಎರಡು ದಿನದ ಹಿಂದೆ ರಥಯಾತ್ರಗೆ ಕಲ್ಲುಬಿದ್ದು ಗಲಭೆಯಾಗಿರುವುದು, ಕರ್ಫ್ಯೂವಿಧಿಸಿರುವುದು, ಬೀದಿಗಳಲ್ಲಿ ರಾತ್ರಿ ಆಗುವಹಲ್ಲೆಗಳು ಬಿಚ್ಚಿಕೊಳ್ಳುತ್ತವೆ. ಮುಸ್ಲಿಹುಡುಗರ ಪ್ರವೇಶದಿಂದ ಮನೆಯಒಳಗಡೆ ಇರುವ ಪಾತ್ರಗಳ ಒಳಗಿನಸಂಘರ್ಷಗಳುಅನಾವರಣವಾದರೆ, ಮನೆಯ ಹೊರಗೆ ಇರುವ ಗುಂಪು ಎಂಬುದು ಮುಖವಾಡ ಬದಲಿಸುತ್ತಾ, ಎರಡೂ ಕೋಮಿನ ಮೂಲಭೂತವಾದಿಗಳ ಹಾಗೆಯೂ ಮಾತನಾಡುತ್ತಾ, ಕೋಮುವಾದಿಗಳು ಮುಖವಿಲ್ಲದವರು ಎಂಬುದನ್ನು ಬಿಚ್ಚಿಡುತ್ತದೆ. ಕೋಮುಗಲಬೆಯನ್ನು ಕುರಿತಂತೆ ಎರಡೂಬಣಗಳ ಒಳವಿವರವನ್ನು ಬಿಚ್ಚಡುತ್ತಾ ಪ್ರೀತಿಯೊಂದೆ ಶಾಶ್ವತ, ಜಾತಿಮತಭೇದಗಳಲ್ಲ ಎಂಬ ಸಂದೇಶವನ್ನು ಈ ನಾಟಕದಲ್ಲಿ ನೀಡಿದ್ದಾರೆ. 

About the Author

ಬಿ. ಸುರೇಶ

ರಂಗಭೂಮಿ ಕಲಾವಿದ, ನಾಟಕಕಾರ, ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ಬಿ. ಸುರೇಶ, 1962ರಲ್ಲಿ ದಾವಣಗೆರೆಯಲ್ಲಿ ಜನಿಸಿದರು. ಹಿರಿಯ ಪತ್ರಕರ್ತೆ ಹಾಗೂ ಲೇಖಕಿ ವಿಜಯಾ ಅವರ ಪುತ್ರ. ಬಿ.ಸುರೇಶ ಅವರು 1973ರಿಂದಲೇ ಬಾಲನಟರಾಗಿ ಹವ್ಯಾಸಿ ರಂಗಭೂಮಿಯಲ್ಲಿ ಕಾಣಿಸಿಕೊಂಡು ಈವರೆಗೂ ಸಕ್ರಿಯ ರಂಗಕರ್ಮಿಯಾಗಿದ್ದಾರೆ. ಅಲ್ಲದೇ, 1976 ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಘಟಶ್ರಾದ್ದ ಚಿತ್ರದಲ್ಲಿ ಬಾಲನಟರಾಗಿ ಕಾಣಿಸಿಕೊಳ್ಳುವ ಮೂಲಕ ಇವರ ಚಿತ್ರರಂಗದ ಬದುಕು ಪ್ರಾರಂಭವಾಯಿತು. 1988 ರಲ್ಲಿ ಮಿಥಿಲೆಯ ಸೀತೆಯರು ನಿರ್ದೇಶನ ಮಾಡಿದ ಅವರು ಚಿತ್ರಕಥೆ, ಸಂಭಾಷಣೆ ಬರೆಯುತ್ತಾ 15 ಕ್ಕೂ ಹೆಚ್ಚಿನ ಚಿತ್ರಗಳಿಗೆ ಸಂಭಾಷಣೆ ರಚಿಸಿದ್ದಾರೆ.  ’ಅರ್ಥ’ ಚಿತ್ರಕ್ಕಾಗಿ ಬಿ.ಸುರೇಶ ಅವರಿಗೆ 2002-2003 ...

READ MORE

Related Books