ವಿಟ್ಟೋರಿಯೋ ಡಿ ಸಿಕಾ ಅವರ ಇಟಾಲಿಯನ್ ಚಲಚಿತ್ರದ ಕಥೆ ‘ಬೈಸಿಕಲ್ ಥೀವ್ಸ್ ’ ಅನ್ನು ಕೆ.ವಿ. ಸುಬ್ಬಣ್ಣ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯು 1987ರಲ್ಲಿ ದ್ವಿತೀಯ ಮುದ್ರಣ ಕಂಡಿದೆ. ವಿಶ್ವ ಚಲನಚಿತ್ರ ಇತಿಹಾಸದಲ್ಲೇ ಬೈಸಿಕಲ್ ಥೀವ್ಸ್ ತನ್ನ ಅಚ್ಚಳಿಯದ ಸ್ಥಾನ ಉಳಿಸಿಕೊಂಡಿದೆ. ನಿಯೋ ರಿಯಾಲಿಸ್ಟ್ ಪಂಥದ ಚಿತ್ರಗಳಿಗೆ ಇದು ಉತ್ತಮ ಮಾದರಿಯಾಗಿದೆ.
ಜಾಗತಿಕ ಎರಡನೇ ಮಹಾಯುದ್ಧ ಮುಗಿದ ನಂತರದ ದಿನಗಳಲ್ಲಿ ಜನರಿಗೆ ಉದ್ಯೋಗವಿರಲಿಲ್ಲ. ಆ ಪೈಕಿ, ಅಂಟೋನಿಯೋ, ಆತನ ಪತ್ನಿ ಹಾಗೂ ಇಬ್ಬರ ಮಕ್ಕಳು ಪಡುವ ಯಾತನೆ ಚಿತ್ರದ ಮೂಲ ಜೀವಾಳ. ಪೋಸ್ಟರ್ಗಳನ್ನು ಅಂಟಿಸುವ ಕೆಲಸ ಪಡೆಯುತ್ತಾನೆ. ಆದರೆ, ಅದಕ್ಕೆ ಬೈಸಿಕಲ್ ಅಗತ್ಯವಿತ್ತು. ಬೈಸಿಕಲ್ ಅಡವಿಟ್ಟಿದ್ದನ್ನು ಬಿಡಿಸಿ ತರುತ್ತಾನೆ. ಮುಂದೆ ಈ ಬೈಸಿಕಲ್ ತನ್ನ ಕಣ್ಣೆದರಲ್ಲೇ ಕಳ್ಳರು ಕದ್ದೊಯ್ಯುತ್ತಾರೆ. ಕೆಲಸವಿಲ್ಲದೇ ಮತ್ತೆ ಅಲೆದಾಟ. ಪತ್ನಿ-ಮಕ್ಕಳು ಉಪವಾಸ. ಅವರನ್ನು ಸಾಕುವುದಕ್ಕಾಗಿ ಬೈಸಿಕಲ್ ನ್ನು ಕಳವು ಮಾಡುತ್ತಾನೆ. ಆದರೆ, ಸಿಕ್ಕು ಬಿದ್ದು ಮಗನ ಎದುರೇ ಅಪಮಾನಕ್ಕೆ ಒಳಗಾಗುತ್ತಾನೆ. ಯುದ್ಧಾನಂತರದ ದಿನಗಳಲ್ಲಿ ಜನರು ಮಾನವೀಯತೆಯನ್ನು ಅನಿವಾರ್ಯವಾಗಿ ಬಲಿ ಕೊಡುವ ಸ್ಥಿತಿ ಉದ್ಭವಿಸಿದ್ದು, ಅದರ ದಾರುಣ ಚಿತ್ರಣವನ್ನು ಈ ಕಥೆ ಕಟ್ಟಿಕೊಡುತ್ತದೆ.
©2024 Book Brahma Private Limited.