‘ವೊಯ್‌ಜೆಕ್ ’ ಕೃತಿಯು ಕೆ.ವಿ ಸುಬ್ಬಾಣ್ಣ ಅವರ ನಾಟಕ ಸಂಕಲನವಾಗಿದೆ. ನಿಜಜೀವನದ ಈ ನಿಜಘಟನೆ ಆಧಾರಿತ ಕೃತಿಯು ಯೋಹಾನ್ ಕ್ರಿಶ್ಚಿಯನ್ ವೊಯ್‌ಜೆಕ್ ಎಂಬ ಹೆಸರಿನ ಸೈನಿಕ- ಕ್ಷೌರಿಕನೊಬ್ಬ ಅಸೂಹೆಯ ಉದ್ವೇಗದಲ್ಲಿ ತನ್ನ ಕೂಡಿಕೆಯ ಹೆಣ್ಣನ್ನು ಕೊಲೆ ಮಾಡಿದ. ಸತ್ಯ ಘಟನೆಯಾದರಿಸಿ ಬುಶ್ ನರ್ ಬರೆದ ಈ ನಾಟಕವು ಚಿಕಿತ್ಸಕ ದೃಷ್ಟಿಯ ನಿಖರತೆಯುಳ್ಳದ್ದು, ಇದರ ಒಂದೊಂದು ದೃಶ್ಯವೂ ಇನ್ನೊಂದರಿಂದ ಪ್ರತ್ಯೇಕವಾದ್ದು ಎನ್ನುವ ಹಾಗೆ ಒಂದೊಂದು ತನ್ನದೇ ಸ್ವತಂತ್ಯ್ರ ಜೀವ ಅಸ್ತಿತ್ವಗಳನ್ನುಳ್ಳದ್ದು ಎನ್ನುವ ಹಾಗೆ ಬಲು ಎಚ್ಚರಿಕೆಯಿಂದ ಯೋಜಿತವಾದ ನಾಟಕ ಇದಾಗಿದೆ. ಪ್ರಸ್ತುತ ಸಮಾಜವು ಬಹುಮಟ್ಟಿಗೆ ರಾಕ್ಷಸೀಯವಾಗಿಬಿಟ್ಟಿರುವ ಹಿನ್ನೆಲೆಯಲ್ಲಿ ಯಾವುದನ್ನು ಸಹಜ, ಸ್ವಾಭಾವಿಕ ಎಂದು ಭಾವಿಸುತ್ತೇವೋ ಅಂಥದನ್ನು ಮತ್ತೆ ನೋಡಿ ಅದರ ಬಗ್ಗೆ ಪುನರಾಲೋಚಿಸಿಕೊಳ್ಳಲು ನಮ್ಮನ್ನು ಒತ್ತಾಯಿಸುತ್ತದೆ ವೊಯ್‌ಜೆಕ್ ಕೃತಿ.
©2025 Book Brahma Private Limited.