ಬಲವಂತ ಗಾರ್ಗಿ ಅವರ ಕಮ್ಮಾರ, ಕರ್ತಾರಸಿಂಗ್ ದುಗ್ಗಲ್ ಅವರ ಹಳೆಯ ಬಾಟಲಿಗಳು ಹಾಗೂ ಸಂತಸಿಂಗ್ ಸೇಕೋ ಅವರ ದಮಯಂತಿ-ಈ ಮೂರು ಪಂಜಾಬಿ ನಾಟಕಗಳನ್ನು ಡಾ. ಪಂಚಾಕ್ಷರಿ ಹಿರೇಮಠ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪಂಜಾಬಿ ಸಾಹಿತ್ಯದಲ್ಲಿ ನಾಟಕಗಳ ರಚನೆಯು ಸುದೀರ್ಘ ಇತಿಹಾಸ ಹೊಂದಿಲ್ಲ. ಇತ್ತೀಚಿನದಾದರೂ ಇತಿಹಾಸವಾದರೂ ರೋಮಾಂಚಕಾರಿಯಾಗಿದೆ ಎಂಬುದನ್ನು ವಿಮರ್ಶಕರು ಒಪ್ಪುತ್ತಾರೆ. ಪಂಜಾಬ್ ಭಾಷೆಯೂ ಬಲ್ಲ ಬಹುಭಾಷಿಕ ಪಂಚಾಕ್ಷರಿ ಹಿರೇಮಠ, ಮೂಲಕ್ಕೆ ಧಕ್ಕೆ ಬಾರದ ಹಾಗೆ ನಾಟಕಗಳನ್ನು ಅನುವಾದಿಸಿದ್ದಾರೆ. ಈ ಮೂರು ನಾಟಕಗಳು ಪಂಜಾಬ ಸಾಹಿತ್ಯ ವಲಯದಲ್ಲಿ ಬಹು ಚರ್ಚಿತವಾದವುಗಳು.
©2025 Book Brahma Private Limited.