ಲೋಕೋತ್ತಮೆ ಮತ್ತು ಕಾಲಯಾತ್ರೆ

Author : ಮೀರಾ ಚಕ್ರವರ್ತಿ

Pages 82

₹ 125.00




Year of Publication: 2022
Published by: ಥಿಯೇಟರ್ ತತ್ಕಾಲ್ ಬುಕ್ಸ್
Address: ಬೆಂಗಳೂರು

Synopsys

‘ಲೋಕೋತ್ತಮೆ ಮತ್ತು ಕಾಲಯಾತ್ರೆ’ ಕೃತಿಯು ಚನ್ನಕೇಶವ, ವಿಶಾಲಾ ವಾರಣಾಶಿ ಹಾಗೂ ಮೀರಾ ಚಕ್ರವರ್ತಿ ಅವರ ನಾಟಕಸಂಕಲನವಾಗಿದೆ. ಈ ನಾಟಕವು ಸುಮಾರು ಕ್ರಿ.ಪೂ 411ರಲ್ಲಿ ಗ್ರೀಕ್ ನಾಟಕಕಾರ ಅರಿಸ್ಟೋಫಿನಿಸ್‌ನಿಂದ ರಚಿತವಾಗಿದೆ. ಇಲ್ಲಿ ನೀಡಿರುವ ಮಾಹಿತಿಯಂತೆ ಸ್ಪಾರ್ಟಾ ಹಾಗೂ ಅಥೆನ್ಸ್ ನಗರಗಳ ನಡುವೆ ನಿಯಮಿತವಾಗಿ ನಡೆಯುತ್ತಿದ್ದ ಯುದ್ಧಗಳಿಂದ ಕಂಗೆಟ್ಟಿದ್ದ ಆ ಎರಡೂ ನಗರಗಳ ಹೆಣ್ಣು ಮಕ್ಕಳು ಲೈಸಿಸ್ಟ್ರಾಟ ಎಂಬ ಹೆಣ್ಣುಮಗಳ ನೇತೃತ್ವದಲ್ಲಿ ಒಂದು ಕ್ರಾಂತಿಕಾರಕ ನಿರ್ಧಾರಕ್ಕೆ ಬರುತ್ತಾರೆ. ಯುದ್ಧ ನಿಲ್ಲಿಸಿ ಎರಡೂ ನಗರಗಳು ಶಾಂತಿಯ ಒಪ್ಪಂದಕ್ಕೆ ಬರುವವರೆಗೂ ತಾವುಗಳು ಯಾರೂ ತಮ್ಮ ತಮ್ಮ ಗಂಡಂದಿರೊಂದಿಗೆ ಹಾಸಿಗೆಯನ್ನು ಹಂಚಿಕೊಳ್ಳುವುದಿಲ್ಲ ಎಂದು ತೀರ್ಮಾನಿಸಿ ಊರಿನ ಹಣಕಾಸಿನ ಸೌಧವನ್ನು ವಶಪಡಿಸಿಕೊಂಡು ಎಲ್ಲ ಹೆಂಗಸರೂ ಅಲ್ಲಿ ಸೇರಿಕೊಂಡು ಪ್ರತಿಭಟಿಸತೊಡಗುತ್ತಾರೆ. ಹೆಂಗಸರು ಮಾಡಿದಂತಹ ಈ ವಿಚಿತ್ರ ಪ್ರತಿಭಟನೆಯನ್ನು ವಿಧಿ ಇಲ್ಲದೆ ಒಪ್ಪುವಂತಹ ಗಂಡಸರು ಶಾಂತಿ ಒಪ್ಪಂದಕ್ಕೆ ಒಪ್ಪಿ ಯುದ್ದದಿಂದ ಹಿಂದೆಸರಿಯುತ್ತಾರೆ. ಹೀಗೆ ಇಂತಹ ಅನೇಕ ವಿಚಾರಗಳನ್ನು ಕಟ್ಟಿಕೊಡುವ ಈ ನಾಟಕವು ಬಹಳ ಭಿನ್ನವಾಗಿ ಕಾಣಿಸುತ್ತದೆ.

About the Author

ಮೀರಾ ಚಕ್ರವರ್ತಿ

ಮೀರಾ ಚಕ್ರವರ್ತಿ ಸಂಸ್ಕೃತ ಅಧ್ಯಾಪಕಿ ಮತ್ತು ಸಂಶೋಧಕಿ. 20-03-1949 ರಲ್ಲಿ ಜನಿಸಿದರು. ತಂದೆ ಎಂ.ಎಸ್. ಚಕ್ರವರ್ತಿ, ತಾಯಿ ಗೀತಾ. ಜಿ-ರೋ ಪಾಯಿಂಟ್ ಎಂಬ ಕವನ ಸಂಕಲನವನ್ನೂ, ನಾಥ ಇದ್ ವನಾಥ್, ನಿಶೆಕುಟುಂಬ, ರಾಜ್ ನಗರ್‍, ಜೀವನಾನಂದರ ಕವಿತೆಗಳು ಇವುಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ದೇವನೂರು ಮಹಾದೇವರ ಕುಸುಮಬಾಲೆ ಕೃತಿಯನ್ನು ಬಂಗಾಲಿಗೆ ಅನುವಾದಿಸಿದ ಹೆಗ್ಗಳಿಕೆಯೂ ಇವರಿಗೆ ಸಲ್ಲುತ್ತದೆ. Landscape of mother, Women and Nation Building ಕೃತಿಗಳ ಸಂಪಾದನೆ ಮಾಡಿದ್ದಾರೆ. ಶ್ರೀಲಂಕಾದಲ್ಲಿ ನಡೆದ ಬೌದ್ಧ ದರ್ಶನ ಸಮ್ಮೇಳನ, ಫಿನ್ ಲ್ಯಾಂಡ್ ನಲ್ಲಿ ಜರುಗಿದ ಈರೋಪಿಯನ್ ದರ್ಶನ ಮತ್ತು ವೈದ್ಯಕೀಯ ...

READ MORE

Related Books