ಆಧೇ ಅಧೂರೇ ಅಂದರೆ ಅಪೂರ್ಣರು ಎಂದರ್ಥ. ಸಮಕಾಲೀನ ಬದುಕಿನ ಅರ್ಥಪೂರ್ಣವಾದ ಹಿಂದಿ ನಾಟಕ. ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಧಾರವಾಡ ಶೈಲಿಯ ಕನ್ನಡವನ್ನು ಇಲ್ಲಿ ಬಳಸಿಕೊಂಡಿದ್ದಾರೆ. ಸೂತ್ರಧಾರ, ನಾಲ್ಕು ಪುರುಷ ಪಾತ್ರಗಳು, ಮುಖ್ಯ ಸ್ತ್ರೀ ಪಾತ್ರವೊಂದು ನಾಟಕದಲ್ಲಿದೆ. ನಮ್ಮೆಲ್ಲರ ಬದುಕಿನಲ್ಲಿ ಸಂಭವಿಸುವ ಮಹತ್ವದ ಪರಿಸ್ಥಿತಿಗಳನ್ನು ಈ ನಾಟಕದಲ್ಲಿ ವಿವರಿಸಲಾಗಿದೆ. ಇಲ್ಲಿ ಬರುವ ಪಾತ್ರಗಳು, ಮನಸ್ಥಿತಿಗಳು ನಮ್ಮದೇ ಬದುಕಿನ ವಾಸ್ತವದ ಕನ್ನಡಿಯಂತಿವೆ. ಸ್ತ್ರೀ ಪುರುಷರ ಜೀವನದಲ್ಲಿ ಮೂಡುವ ಆಕರ್ಷಣೆ, ವಿಕರ್ಷಣೆಗಳ ಜೀವಂತ ಚಿತ್ರಣವಿದೆ. ಆಧುನಿಕ ಸಮಾಜದಲ್ಲಿ ಕೌಟುಂಬಿಕ ಜೀವನ ವಿಚ್ಛಿದ್ರಗೊಳ್ಳುವ ಸನ್ನಿವೇಶಗಳಿಗೂ ಈ ನಾಟಕ ಸಾಕ್ಷಿಯಾಗಿದೆ.
©2024 Book Brahma Private Limited.