ಧರ್ಮ-ರಾಜಕಾರಣಗಳು ಭಾರತದಲ್ಲಿ ಮಹಾಕಾವ್ಯದ ಕಾಲದಿಂದಲೇ ಪುರೋಹಿತಶಾಹಿ ವ್ಯವಸ್ಥೆಯನ್ನು ಒಳಗೊಂಡಿದೆ. ಭಾರತೀಯ ಪುರಾಣ ಪರಂಪರೆಯಲ್ಲಿ ಆದರ್ಶೀಕರಿಸಿರುವ ವ್ಯಕ್ತಿಗಳನ್ನು ದೈವತ್ವದ ಮಟ್ಟಕ್ಕೇರಿಸಿ ನೈತಿಕಮೌಲ್ಯಗಳನ್ನು ಪೋಷಿಸಿಕೊಂಡು ಬರಲಾಗಿದೆ. ಇದೇ ಮಾದರಿಯನ್ನು ಅನುಸರಿಸಿಕೊಂಡು ’ಕತ್ತೆ ಪುರಾಣ’ ನಾಟಕ ವಸ್ತುವನ್ನು ಬಿಂಬಿಸಲಾಗಿದೆ.
ಬಹುಪಾಲು ನಾಟಕದ ವಸ್ತುಗಳು ಸಾಮಾಜಿಕ, ರಾಜಕೀಯ, ಆರ್ಥಿಕ ಸ್ಥಿತ್ಯಂತರಗಳ ನಂತರ ಬಹಳಕಾಲ ಉಳಿಯುವುದಿಲ್ಲ. ಕತ್ತೆಪುರಾಣ ನಾಟಕದ ವಸ್ತುವಿನ್ಯಾಸದಲ್ಲಿ ಜೀವವಿರೋಧಿ ಐಷಾರಾಮಿ ಪರಂಪರೆಯನ್ನು ಉಳಿಸಿಕೊಳ್ಳುವ, ಇತಿಹಾಸವನ್ನು ನಿರ್ಮಿಸುವ ಸಲುವಾಗಿ ಕಿರೀಟದ ಸೈಜಿಗೆ ತಲೆಯನ್ನು ಬೆಳೆಸಿಕೊಳ್ಳಲು ಹಂಬಲಿಸುವ ರಾಜನ ಮಹತ್ವಾಕಾಂಕ್ಷೆ, ಗೋಲ್ ಗುರೂಜಿಯ ಸಲಹೆ ಸೂಚನೆಗಳು ಇವತ್ತಿನ ರಾಜಕೀಯ ನಡೆಗೆ ಕನ್ನಡಿಯಂತಿವೆ. ನಗಬಾರದೆಂಬ ಕಟ್ಟಪ್ಪಣೆ, ಮಾಧ್ಯಮಗಳ ಪ್ರಚಾರಪ್ರಿಯ ವ್ಯಾಮೋಹ, ಶಿಸ್ತಿನ ಸಿಪಾಯಿಗಳು. ರಾಜನ ಸುತ್ತಲಿರುವ ಹೊಗಳುಭಟ್ಟಂಗಿಗಳ ಚುರುಕು ಮಾತುಗಳು ವಸ್ತುವನ್ನು ಯಾವತ್ತೂ ಸಲ್ಲುವಂತೆ ಕಟೆದು ನಿಲ್ಲಿಸಿವೆ.
©2025 Book Brahma Private Limited.