ಹ್ಯಾಮ್ಲಿಟ್‌

Author : ಕೆ.ಎಸ್. ಭಗವಾನ್

Pages 164

₹ 90.00




Year of Publication: 2002
Published by: ಮಹಿಮಾ ಪ್ರಕಾಶನ
Address: ಮೈಸೂರು.

Synopsys

`ಹ್ಯಾಮ್ಲಿಟ್‌’ ಕೆ.ಎಸ್‌ ಭಗವಾನ್‌ ಅವರ ಅನುವಾದಿತ ನಾಟಕವಾಗಿದೆ. ಷೇಕ್‌ಸ್ಪಿಯರ್‌ ನಾಟಕದ ಪಾತ್ರಗಳ ಮೂಲಕ ಮಾತನಾಡುತ್ತ, ಜನತೆಗೆ ನಿಗೂಢ ಸಂದೇಶಗಳನ್ನು ನೀಡಿ ನ್ಯಾಯವನ್ನು ಗೌರವಸುತ್ತಿದ್ದುದು ಆತನ ಬರವಣಿಗೆಯ ಪ್ರತಿ ಶಬ್ದದಲ್ಲಿಯೂ ಧ್ವನಿಸಿದೆ. ಅನುವಾದಕರು ಆತನ ಇನ್ನೂ ಆರು ನಾಟಕಗಳನ್ನು ಅನುವಾದಿಸಿದ್ದಾರೆ.

About the Author

ಕೆ.ಎಸ್. ಭಗವಾನ್
(14 July 1945)

ವಿಮರ್ಶಕ, ಅನುವಾದಕರಾದ ಕೆ.ಎಸ್.ಭಗವಾನ್ ಅವರು 14-07-1945ರಂದು ಮೈಸೂರು ಜಿಲ್ಲೆಯ ಕಲ್ಲಹಳ್ಳಿಯಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಷಯದಲ್ಲಿ ಎಂ.ಎ ಪದವಿ ಪಡೆದಿರುವ ಅವರು ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಡಿ.ಲಿಟ್.ಪದವಿಯನ್ನೂ ಪಡೆದಿದ್ದಾರೆ. ಬಂಡಾಯ ವಿಮರ್ಶೆಯ ಮೊದಲ ಮತ್ತು ಮುಖ್ಯ ವಿಮರ್ಶಕರಾದ ಭಗವಾನ್ ವಿಮರ್ಶೆಯಲ್ಲಿ ಅಂತರ್ ಶಿಸ್ತೀಯ ಅಧ್ಯಯನಗಳನ್ನು ಪ್ರಾರಂಭಿಸಿದವರು.  ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿರುವ ಅವರು, ಮೈಸೂರಿನ ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಅನುವಾದಕರಾಗಿ ಹೆಸರುವಾಸಿಯಾಗಿರುವ ಭಗವಾನ್ ಷೇಕ್ಸ್ ಪಿಯರ್ ನ ಒಂಬತ್ತು ಮಹತ್ವದ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಕೃತಿ ಶಂಕರಾಚಾರ್ಯ ಮತ್ತು ಪ್ರತಿಗಾಮಿತನ ...

READ MORE

Reviews

ಹೊಸತು- ೨೦೦೩-ಜನವರಿ

ಮಹಾರಾಜ ಎಂದು ಬಣ್ಣಿಸಲ್ಪಟ್ಟ ಷೇಕ್‌ಸ್ಪಿಯ‌ನ ಇಂಗ್ಲಿಷ್ ನಾಟಕದ ಕನ್ನಡ ಅನುವಾದ. ತನ್ನ ಹಸಿ-ಬಿಸಿ ಭಾವನೆಗಳನ್ನು ಇಡಿಯಾಗಿ ಉಳಿಸಿಕೊಂಡು ನಾಟಕವು ತಾನಾಗಿ ರೂಪಾಂತರಗೊಂಡಂತೆ. ಮೂಲಕ್ಕೆ ಅತಿ ಹತ್ತಿರವಾಗಿ ತಂದು ನಿಲ್ಲಿಸಿದವರು ಶ್ರೀ ಭಗವಾನ್, ಷೇಕ್ ಸ್ಪಿಯರ್ ನಾಟಕದ ಪಾತ್ರಗಳ ಮೂಲಕ ಮಾತನಾಡುತ್ತ, ಜನತೆಗೆ ನಿಗೂಢ ಸಂದೇಶಗಳನ್ನು ನೀಡಿ ನ್ಯಾಯವನ್ನು ಗೌರವಿಸುತ್ತಿದ್ದುದು ಆತನ ಬರವಣಿಗೆಯ ಪ್ರತಿ ಶಬ್ದದಲ್ಲಿಯೂ ಧ್ವನಿಸಿದೆ. ಅನುವಾದಕರು ಆತನ ಇನ್ನೂ ಆರು ನಾಟಕಗಳನ್ನು ಅನುವಾದಿಸಿದ್ದಾರೆ.

Related Books