ಸೋಫೋಕ್ಲೇಸಿನ ಮೂರು ಗ್ರೀಕ್ ನಾಟಕಗಳನ್ನು ಕನ್ನಡದ ವಿಶಿಷ್ಟ ವಿದ್ವಾಂಸರಾಗಿದ್ದ ಕ.ವೆಂ. ರಾಘವಾಚಾರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ . ಸೋಫೋಕ್ಲೇಸ್ನ ಈ ನಾಟಕಗಳಲ್ಲಿ ಕಥಾಶಕ್ತಿ, ನಾಟಕೀಯತೆ, ಮತ್ತು ಪಾತ್ರ ನಿರೂಪಣೆಗಳು ಪ್ರಧಾನವಾಗಿ ಕಂಡುಬರುತ್ತವೆ. ಮನುಷ್ಯ ಕಟ್ಟಲೆಗಳು ಹಾಗೂ ವಿಶ್ವನಿಯಮ ಇವುಗಳ ನಡುವಿನ ಸಂಘರ್ಷಣೆ, ಪಾಪಕ್ಕೂ, ಅಧರ್ಮಕ್ಕೂ ಒದಗುವ ಅನಿವಾರ್ಯ ಪ್ರಾಯಶ್ಚಿತ್ತ, ಕಾರಣಗಳು ಬೇರೆಲ್ಲೋ ಇದ್ದರೂ, ಕೆಲವೊಮ್ಮೆ ನಿರ್ದೋಷಿಗಳೂ ದುಃಖವನ್ನು ಅನುಭವಿಸುವುದು ಮುಖ್ಯವಾಗಿ ಇವರ ನಾಟಕಗಳಲ್ಲಿ ಕಂಡುಬರುತ್ತವೆ.
©2024 Book Brahma Private Limited.