ಡಾ. ವಿಶ್ವನಾಥ್ ಪ್ರಸಾದ್ ತಿವಾರಿ ಪ್ರಸಿದ್ಧ ಹಿಂದೀ ಕವಿ, ವಿಮರ್ಶಕರು. ಗಾಢ ಜೀವನಾನುಭವ ಮತ್ತು ಅಧ್ಯಯನದ ಹಿನ್ನೆಲೆ ಅವರ ಕಾವ್ಯದಲ್ಲಿದೆ, ಸಾವು ದುರಂತಗಳ ಎದುರು ಸೆಣಸಾಡುವ, ಕತ್ತಲೆ
ಬೆಳಕುಗಳ ಮಧ್ಯೆ ಹೋರಾಡುವ ಮನುಷ್ಯನ ಚಿತ್ರಗಳು, ಆಗೋಚರ ಶಕ್ತಿಯಲ್ಲಿಯೂ ಮನುಷ್ಯತ್ವದ ಭಾವವನ್ನು ಅರಸುವ ಕಳಕಳಿ ಅವರ ಕವಿತೆಗಳ ಮೂಲ ಧಾತು. ತಿವಾರಿಯವರು
ತಾಯಿಯ ಬಗ್ಗೆ ರಚಿಸಿದ ಕವಿತೆಗಳು ತುಂಬ ಆದ್ರ್ರವಾಗಿವೆ.
ಕನ್ನಡದ ಪ್ರಸಿದ್ಧ ಕವಿ ಹಾಗೂ ಅನುವಾದಕರಲ್ಲಿ ಒಬ್ಬರಾದ ಡಾ. ಸಿದ್ಧಲಿಂಗಪಟ್ಟಣ ಶೆಟ್ಟಿ ಇದನ್ನು ಕನ್ನಡಕ್ಕೆ ತಂದಿದ್ದಾರೆ. ಒಟ್ಟು 75 ಅನುವಾದಿತ ಕವಿತೆಗಳು ಇಲ್ಲಿವೆ. ’ಭಾಷಾಪ್ರಯೋಗ, ಅಭಿವ್ಯಕ್ತಿಯ ವಿಷಯದಲ್ಲಿ ಅವರು ವಹಿಸುವ ಮುತುವರ್ಜಿಗೆ ನಿದರ್ಶನ ಈ 'ಸಂಘರ್ಷದಡೆಗೆ' ಎಂಬ ಮೆಚ್ಚುಗೆಗೂ ಕೃತಿ ಪಾತ್ರವಾಗಿದೆ.
©2024 Book Brahma Private Limited.