ಭಾರತೀಯ ಭಾಷೆಯ ಉತ್ತಮ ನಾಟಕಗಳನ್ನು ಕನ್ನಡಿಗರಿಗೆ ಪರಿಚಯಿಸುವ ಉದ್ದೇಶದಿಂದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ’ಭಾರತೀಯ ಭಾಷಾ ನಾಟಕ ಮಾಲಿಕೆ’ಯನ್ನು ಆರಂಭಿಸಿದೆ. ’ನಾಥರಿದ್ದೂ ಅನಾಥೆ’ ನಾಟಕವು ಈ ಸರಣಿಯಲ್ಲಿ ಪ್ರಕಟವಾದ ಕೃತಿ. ಮೂಲನಾಟಕಕಾರ ಶ್ಯಾವಲಿ ಮಿತ್ರ ಅವರು ಬಂಗಾಳದ ರಂಗಭೂಮಿ ಮತ್ತು ಸಿನಿಮಾ ರಂಗದ ಪ್ರಸಿದ್ದ ನಟಿ. ಮೂಲ ಹೆಸರಾದ ’ನಾಥಬತೀ ಅನಾಥಬತ್’ ನಾಟಕವನ್ನು ’ನಾಥರಿದ್ದೂ ಅನಾಥೆ’ ಎಂದು ಕನ್ನಡೀಕರಿಸಲಾಗಿದೆ. ಕನ್ನಡ ರೂಪಾಂತರ ಮಾಡಿದವರು ಲೇಖಕಿ, ಮೀರಾ ಚಕ್ರವರ್ತಿ ಮತ್ತು ಕವಿ ಎಲ್. ಎನ್. ಮುಕುಂದರಾಜ್.
ದ್ರೌಪದಿಯ ನೋಟದ ಮೂಲಕವೇ ಮಹಾಭಾರತದ ಸನ್ನಿವೇಶಗಳನ್ನು ನೋಡುವ ’ನಾಥರಿದ್ದೂ ಅನಾಥೆ’ ಸಹಜವಾಗಿಯೇ ದ್ರೌಪದಿಯ ಪರವಾದ ವಾದವೊಂದನ್ನು ರೂಪಿಸುತ್ತದೆ. ಈ ನಾಟಕದ ಪಾತ್ರವಾದ ದ್ರೌಪದಿಯ ವ್ಯಕ್ತಿತ್ವದಲ್ಲಿ ಯಾತನೆ, ಅಣಕ, ಹಾಸ್ಯ ಕೋಪ, ಮುಂತಾದ ಭಾವನೆಗಳನ್ನು ಪ್ರಧಾನವಾಗಿಸಿ ಅವನ್ನೆಲ್ಲಾ ಈ ಕಾಲದ ನಿರೂಪಕಿಯೊಬ್ಬಳ ಮೂಲಕ ಮಂಡಿಸಿದ್ದಾರೆ. ದ್ರೌಪದಿ ನಾಟಕದುದ್ದಕ್ಕೂ ಎಲ್ಲಾ ಪಾತ್ರವನ್ನು ಪ್ರಶ್ನಿಸುತ್ತಾ, ಗೇಲಿ ಮಾಡುತ್ತಾ ಟೀಕಿಸುತ್ತಾ ಮಹಾಭಾರತದ ಘಟನಾವಳಿಗಳನ್ನು ಪುನರ್ವಿಮರ್ಶಿಸುತ್ತಾ ನಡೆಯುತ್ತಾಳೆ.
©2024 Book Brahma Private Limited.