‘ಐತೀರ್ಪು’ ರೇಚಂಬಳ್ಳಿ ದುಂಡಮಾದಯ್ಯ ಅವರ ಕವನಸಂಕಲನ. ಈ ಕೃತಿಗೆ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಡಾ. ಚಾರ್ಲ್ಸ್ ಲೋಬೋ ಅವರು ಮುನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ನಾವೆಲ್ಲರೂ ಒಂದೇ ಕವನದಲ್ಲಿ ನೂರು ಜಾತಿ, ನೂರು ಧರ್ಮ, ನೂರು ಭಾಷೆ ಇದ್ದರೂ ಭಾರತೀಯರೊಂದೇ ಎಂದು ಸಾರಿ ಹೇಳಿದ ರೀತಿ ಮೆಚ್ಚುವಂತಹದು. 'ಬಣ್ಣದ ಬಲೂನು ತಲೆಮಾರುಗಳ ದೃಷ್ಟಿಕೋನಗಳನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದೆ. “ಯಾರ ಪಾಲು ಯಾರಿಗೋ' ಎಂಬ ಕವನದ 'ಸಾವಿನಲ್ಲೂ ಹೊಟ್ಟೆ ಹೊರೆದು ಓಡಿ ಹೋಯಿತು' ಎಂಬ ಸಾಲು ಬಹಳ ಅರ್ಥಪೂರ್ಣವಾಗಿದೆ. ದೇವಾಲಯಗಳು ಜೀರ್ಣೋದ್ದಾರ ಗೊಂಡರೂ ಧೂಪ ಮಾರುವವಳ ಕಸುಬು ನಾಶವಾಗುವ ಚಿತ್ರಣ 'ಸಾಕಷ್ಟು ಅಗಲಗೊಂಡಿತ್ತು ಹುಂಡಿಗಳ ಬಾಯಿಯೂ ಕೂಡ' ಎಂಬ ಸಾಲಿನಲ್ಲಿ ಎದ್ದು ಕಾಣುತ್ತಿದೆ. ಬಣ್ಣವ ತುಂಬುವ ಸ್ಪರ್ಧೆಯನ್ನು 'ಐತೀರ್ಪು' ಕವನ ಬಹಳ ಮಾರ್ಮಿಕವಾಗಿ ಚಿತ್ರಿಸಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ಉತ್ತಮ ಕವನಗಳ ರಚನಕಾರರಾದ ದುಂಡಮಾದಯ್ಯ 36 ವರ್ಷಗಳಿಂದ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಾತ್ರವಲ್ಲ, ಸೇವೆಗಾಗಿ ಗುರುತಿಸಿಕೊಂಡಿದ್ದಾರೆ. ಅವರ ಸಾಹಿತ್ಯಸೇವೆ ಅವರ ನಿವೃತ್ತಿ ಜೀವನದಲ್ಲಿ ಅವರನ್ನು ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರೇರೇಪಿಸುವುದರಲ್ಲಿ ಸಂಶಯವಿಲ್ಲ ಎಂದು ಹಾರೈಸಿದ್ದಾರೆ.
©2024 Book Brahma Private Limited.