20ನೇ ಶತಮಾನದ ಮಹಾಕಾವ್ಯಗಳಲ್ಲಿ ವಿ.ಕೃ. ಗೋಕಾಕ ಅವರ ’ಭಾರತ ಸಿಂಧು ರಶ್ಮಿ’ ಮಹತ್ವದ ಕೊಡುಗೆಯೂ ಆಗಿದೆ. ಈ ಕಾಲದ ಮಹಾಕಾವ್ಯ. ಭಾರತ ಸಿಂಧು ರಶ್ಮಿ. ಭಾರತದ ಪ್ರಾಚೀನ ಭವ್ಯ ಇತಿಹಾಸ ಹಾಗೂ ವೇದಕಾಲೀನ ಭಾರತವನ್ನು ವಿಹಂಗಮವಾಗಿ ವಿಶ್ಲೇಷಿಸುತ್ತದೆ. ಈ ಕೃತಿಯು ಮಹಾಕಾವ್ಯದ ಮೊದಲ ಭಾಗವಾಗಿದೆ. ಈ ಮಹಾಕಾವ್ಯದಲ್ಲಿ 12 ಖಂಡಗಳು, 35 ಸಾವಿರ ಸಾಲುಗಳಿವೆ. ಋಗ್ವೇದ ಕಾಲದ ಜನಜೀವನವನ್ನು ವಿವರಿಸುತ್ತದೆ. ವಿಶೆಷವಾಗಿ ಮಹರ್ಷಿ ವಿಶ್ವಾಮಿತ್ರನ ವ್ಯಕ್ತಿತ್ವ ವಿವಿಧ ಆಯಾಮಗಳನ್ನು ಚರ್ಚಿಸುತ್ತದೆ. ವಮಹರ್ಷಿ ವಿಶ್ವಾಮಿತ್ರನೇ ಈ ಮಹಾಕಾವ್ಯದ ನಾಯಕ. ಕಾವ್ಯ ಚೇತನ ಹಾಗೂ ಸಾಮರಸ್ಯಗಳ ಗುಣಲಕ್ಷಣಗಳಿಗೆ ಈ ಮಹಾಕಾವ್ಯ ಉತ್ತಮ ಮಾದರಿ ನೀಡುತ್ತದೆ. ಸಪ್ತ ಕಿರಣಗಳು ಹಾಗೂ ಸಪ್ತ ಲೋಕಗಳ ವಿವರಣೆಯೂ ಹೃದಯಂಗಮವಾಗಿದೆ. ಈ ಮಹಾಕಾವ್ಯ ರವರೆಗೆ ವಿನಾಯಕರು ಮಾಡಿಕೊಂಡ ಸಿದ್ಧತೆಗಳ ವಿವರಣೆಯೂ ಕೃತಿಯ ವಿಶೇಷತೆಯನ್ನು ಹೆಚ್ಚಿಸಿ, ಓದುಗರಿಗೆ ಪ್ರೇರಣೆ ನೀಡುವಂತಿದೆ.
ಋಗ್ವೇದದ ತತ್ವಗಳು, ಪೌರಾಣಿಕ ಕಾಲ್ಪನಿಕ ಸಾಮರ್ಥ್ಯ, ಆರ್ಯ-ದ್ರಾವಿಡ ಸಂಸ್ಕೃತಿಯ ಮಿಶ್ರಣ ಹಾಗೂ ಅದರಿಂದ ಉಂಟಾದ ಸಂಘರ್ಷ ಇತ್ಯಾದಿ ಭಾರತ ಸಿಂಧು ರಶ್ಮಿಯ ವಿಶೇಷ ವಸ್ತುವಾಗಿದೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ವಿದ್ಯಾಭವನದ ರಾಜಾಜಿ ಪ್ರಶಸ್ತಿ ಮತ್ತು ಐ.ಬಿ.ಎಚ್. ಪ್ರಶಸ್ತಿಗಳೂ ದೊರಕಿವೆ. 1991 ರಲ್ಲಿ ಇದೇ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ಅವರ ಸಮಗ್ರ ಸಾಹಿತ್ಯಕ್ಕೆ (1969-1984 ಅವಧಿವರೆಗಿನ ಸಾಹಿತ್ಯ ಪರಿಗಣನೆ) ಜ್ಞಾನಪೀಠ ಪ್ರಶಸ್ತಿ ದೊರಕಿದೆ ಎಂದು ಆಯ್ಕೆ ಸಮಿತಿಯೇ ಸ್ಪಷ್ಟಪಡಿಸಿದೆ. ಈ ಪ್ರಶಸ್ತಿಯನ್ನು ದೆಹಲಿಯಲ್ಲೇ ನೀಡಲಾಗುತ್ತಿದೆ. ಆದರೆ, ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಸ್ವತಃ ಮುಂಬೈಗೆ ಬಂದು ಗೋಕಾಕ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದು, ಗೋಕಾಕರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.
©2024 Book Brahma Private Limited.