ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ಆರಂಭದ ಕವಿತೆಗಳಿಂದ ಹಿಡಿದು, ಮರಣೋತ್ತರವಾಗಿ ಪ್ರಕಟಗೊಂಡ ಕವಿತೆಗಳವರೆಗೂ ನೂರಾರು ಕವಿತೆಗಳಲ್ಲಿ ಬರುವ ಸುಲಭವಾಗಿ ಅರ್ಥವಾಗದ ಸುಮಾರು 1400 ಪದಗಳ ಅರ್ಥ ಏನು ಎಂಬುದನ್ನು ಲೇಖಕರು ಇಲ್ಲಿ ವಿವರಿಸಿದ್ದಾರೆ. ಲೇಖಕರು ಧಾರವಾಡದ ಸುತ್ತಮುತ್ತ ಹಲವು ಜಾತ್ರೆ, ಸಮಾರಂಭಗಲ್ಲಿ ಓಡಾಡಿ ಪದಗಳ ಅರ್ಥವನ್ನು ಸಂಗ್ರಹಿಸಿ ಇಲ್ಲಿ ಕೊಟ್ಟಿದ್ದಾರೆ. ಬೇಂದ್ರೆ ಕಾವ್ಯದ ವಾಚ್ಯಾರ್ಥ, ಧ್ವನ್ಯರ್ಥ, ಲಕ್ಷ್ಯಾರ್ಥಗಳನ್ನು ಹೇಗೆ ಗ್ರಹಿಸಬೇಕು ಎಂಬುದನ್ನು ತಿಳಿಸಿದ್ದಾರೆ.
©2024 Book Brahma Private Limited.