ದೇಶಾಂಶ ಹುಡಗಿಯವರಿಗೆ ಈ ಕೋಶ ರಚನೆಗೆ ಆದರ್ಶವಾದುದು ರೆ. ಎಫ್. ಕಿಟ್ಟೆಲ್ಲರು ಪ್ರಕಟಿಸಿದ ಕನ್ನಡ-ಇಂಗ್ಲಿಷ್ ನಿಘಂಟು. ’ಬೀದರ ಕನ್ನಡ ಕೋಶ’ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಬಳಕೆಯಲ್ಲಿರುವ ಪದಗಳ ಅರ್ಥಕೋಶ. ’ಬಿದರಿ ಕನ್ನಡ ನುಡಿಯು ಗುಂಡು ಸಿಡಿದಂತೆ, ಒಮ್ಮೊಮ್ಮೆ ಜುಳು ಜುಳನೆ ಜಲವು ಹರಿದಂತೆ’ ಎಂದು ಲೇಖಕರೇ ಈ ಪ್ರಾದೇಶಿಕ ಭಾಷೆಯ ವೈಶಿಷ್ಟ್ಯವನ್ನು ಹೆಚ್ಚಿಸಿದ್ದಾರೆ. ಒಂದು ಪದಕೋಶ ಸಾಧ್ಯವಾದಷ್ಟು ಪ್ರಾದೇಶಿಕ ಸಂಸ್ಕೃತಿಯ ಪಳೆಯುಳಿಕೆಗಳನ್ನು ಹಿಡಿದಿಡಿಯಬೇಕೆನ್ನುವ ಪ್ರಾಮಾಣಿಕ ಕಳಕಳಿ ಕೋಶದ ಶಾಸ್ತ್ರೀಯತೆ ಹಾಗೂ ವೈಜ್ಞಾನಿಕ ಮಹತ್ವವನ್ನು ತಿಳಿಯಪಡಿಸುತ್ತದೆ.
©2024 Book Brahma Private Limited.