ಅಮೃತಪಥ

Author : ವಿ.ಮಾ. ಜಗದೀಶ್

Pages 476

₹ 450.00




Year of Publication: 2021
Published by: ಪ್ರೇಮ ಪ್ರಕಾಶನ
Address: ಮೈಸೂರು.90, ಬೆಳಕು, ವಿವೇಕಾನಂದ ಬ್ಲಾಕ್ ಶಿಕ್ಷಕರ ಬಡಾವಣೆ, ಮೈಸೂರು- 570029
Phone: 9886026085

Synopsys

‘ಅಮೃತಪಥ’ ಲೇಖಕ ವಿ.ಮಾ. ಜಗದೀಶ್ ಅವರು ಬರೆದಿರುವ ಆಧುನಿಕ ಮಹಾಕಾವ್ಯ. ಈ ಕೃತಿಯ ಕುರಿತು ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್, ಡಾ. ಪ್ರದಾನ್ ಗುರುದತ್ತ, ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಪ್ರೊ.ಬಸವರಾಜ್ ಡಿ.ಟಿ ಸೇರಿದಂತೆ ಹಲವು ಹಿರಿಯ ಲೇಖಕರು ನಲ್ನುಡಿಯನ್ನು ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ಸಾವಿತ್ರಿ ಸತ್ಯವಾನರ ಕಥನವನ್ನು ಕನ್ನಡದಲ್ಲಿ ಇಷ್ಟು ಸ್ವತಂತ್ರವಾಗಿ ಸಹಜವಾಗಿ ಈವರೆಗೂ ಯಾರೂ ಪಡಿಮೂಡಿಸಿರಲಿಲ್ಲ, ಅದು ನಿಮ್ಮಿಂದ ಸಾಧ್ಯವಾಗಿದೆ’ ಎನ್ನುತ್ತಾರೆ ಹಿರಿಯ ಲೇಖಕ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್. ಇನ್ನು ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ ಅವರು ಸ್ತ್ರೀ-ಪುರುಷ ಯೋಗ ಎಂಬ ಧ್ಯಾನ ಮತ್ತು ದಾಂಪತ್ಯ ಸುಖಗಳ ಅದ್ವೈತ್ವವನ್ನು ಸಾಧಿಸುವ ಮನೋವೈಜ್ಞಾನಿಕ ಸೂತ್ರವೊಂದು ಸಾವಿತ್ರಿ ಸತ್ಯವಾನರನ್ನು ಜೀವನ್ಮುಖಿಯಾಗಿಸುವುದು ಇಲ್ಲಿನ ವೈಶಿಷ್ಟ್ಯ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ವಿ.ಮಾ. ಜಗದೀಶ್
(27 March 1950)

ಹಿರಿಯ ಲೇಖಕ, ನಾಟಕಕಾರ ವಿ.ಮಾ. ಜಗದೀಶ್ ಶಿವಮೊಗ್ಗ ಜಿಲ್ಲೆಯ ಚಾಮೇನಹಳ್ಳಿ ಗ್ರಾಮದವರು. ತಂದೆ ವಿ.ರಾಜಶೇಖರಯ್ಯ. ಕನ್ನಡ ಎಂ.ಎ. ಪದವೀಧರರಾದ ಅವರು ಆಲ್ ಇಂಡಿಯಾ ರೇಡಿಯೋ ಆಕಾಶವಾಣಿಯಲ್ಲಿ 1976ರಿಂದ 1987 ರವರೆಗೆ ಪ್ರಸಾರ ನಿರ್ವಾಹಕರಾಗಿ ಕಾರ್ಯನಿರ್ವಹಿಸಿ ಆ ನಂತರ ಇಎಂಪಿಸಿ - ಐಜಿಎನ್ಓಯು (ಜ್ಞಾನವಾಣಿ)ಯಲ್ಲಿ ನಿಲಯ ನಿರ್ವಾಹಕರಾಗಿ ಸೇವೆಸಲ್ಲಿಸಿ ಆನಂತರದಲ್ಲಿ ಕ್ಷೇತ್ರ ಪ್ರಚಾರ ಅಧಿಕಾರಿಯಾಗಿಯೂ ಸೇವೆಸಲ್ಲಿಸಿದ್ದಾರೆ. ಕವಿತೆ, ಕಾದಂಬರಿ, ನಾಟಕ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ಪ್ರಕಟಿಸಿದ್ದಾರೆ. ...

READ MORE

Reviews

‘ಅಮೃತ ಪಥ’ ಕೃತಿಯ ವಿಮರ್ಶೆ

ಸ್ತ್ರೀವಾದದ ಆಶಯದ ಸಾವಿತ್ರಿಯ ಕಥೆ :ಅಮೃತ ಪಥ

ಪ್ರಾಚೀನ ಮಹಾಕಾವ್ಯಗಳನ್ನು ನಾವು ಇಲ್ಲಿ ಕಾಣಲಾರೆವು. ಅದರ ಬದಲಿಗೆ ಆಧುನಿಕ ಕಾದಂಬರಿ ಪ್ರಕಾರದ ಲಕ್ಷ್ಮಣಗಳನ್ನು ಗುರುತಿಸಬಹುದಾಗಿದೆ. ಹಾಗಾಗಿ ಪದ್ಯ ಸಾಲುಗಳಲ್ಲಿ ಬರೆದ ಕಾದಂಬರಿ ಎಂದೂ ಇದನ್ನು ಪರಿಶೀಲಿಸಬಹುದಾಗಿದೆ. 

ನಿವೃತ್ತ ಆಕಾಶವಾಣಿ ಅಧಿಕಾರಿ ವಿ. ಮಾ. ಜಗದೀಶ್ ರಚಿಸಿದ 'ಅಮೃಥ ಪಥ' ಎಂಬ ಸರಳರಗಳೆಯ ಮಹಾಕಾವ್ಯವು ಮಹಾಭಾರತದಲ್ಲಿರುವ ಸತ್ಯವಾನ್ ಸಾವಿತ್ರಿ ಉಪಾಖ್ಯಾನವನ್ನು ಆಧರಿಸಿ, ಆಧುನಿಕ ಕಾಲದ ಆಶಯಗಳನ್ನು ಆವಾಹಿಸಿ ಕಟ್ಟಿದ ಕೃತಿ, ಅಲ್ಲಿ ಮಾರ್ಕಾಂಡೇಯ ಕುದು ಮುನಿಗಳು ಹಿಂದೆ, ಪುರಾಣ ಕಾಲದಲ್ಲಿ ಪಾಂಡವರ ಪತ್ನಿ ಸಂತಾ ದೌಪದಿಯ ಹಾಗೆ ಸಾವಿತ್ರಿಯೂ ದೃಢಚಿತ್ತಳಾಗಿ, ಪತಿವ್ರತೆಯಾಗಿ ಬದುಕಿದ ರತ್ನವೆಂದು ಅವಳ ಕಥೆಯನ್ನು ಹೇಳುತ್ತಾರೆ.

ಸಾವಿತ್ರಿ, ಸತ್ಯವಾನನ ಕಥೆ ಭಾರತದ ಜನಮಾನಸದಲ್ಲಿ ಭದ್ರವಾಗಿ ನೆಲೆಸಿದ ಒಂದು ಕಥೆ. ಈ ಕಥೆಯನ್ನಾಧರಿಸಿ ಅರವಿಂದರು ಇಂಗ್ಲಿಷಿನಲ್ಲಿ ಸಾವಿತ್ರಿ' ಎಂಬ ದಾರ್ಶನಿಕ ಕಾವ್ಯವನ್ನು ಬರೆದಿದ್ದಾರೆ. ಕುವೆಂಪು ಅವರು "ಯಮನಸೋಲು' ನಾಟಕದಲ್ಲಿ ಇದನ್ನು ಹೇಳು ಹೊಸ ದೃಷ್ಟಿಯಲ್ಲಿ ನೋಡಿದ್ದಾರೆ. ಈಗ ವಿ. ಮಾ. ಜಗದೀಶ್ ಅವರು ಸರಳ ರಗಳೆಯ ಶೈಲಿಯಲ್ಲಿ ಮಹಾಕಾವ್ಯವನ್ನಾಗಿ ಬರೆದಿದ್ದಾರೆ. ಇದರಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಕಥೆಯ ಅತಿಮಾನುಷ ಅಂಶಗಳನ್ನು ಕಳಚಿ, ಆಧುನಿಕ ಸ್ತ್ರೀವಾದಕ್ಕೆ ಒಪ್ಪಿತವಾಗುವ ರೀತಿಯಲ್ಲಿ ಮುರಿದುಕಟ್ಟಿದ್ದಾರೆ, ಹಾಗಾಗಿ ಇದು ಒಂದು ಆಧುನಿಕ ಕಾದಂಬರಿಯ ಹಾಗಿದೆ. ಅದೇ ರೀತಿ ಇದು ಸತ್ಯವಾನ್ ಸಾಹಿತಿ ಉಪಾಖ್ಯಾನದ ಕವಿಯ ಹೆಸರು ಹೇಳದೆ ಈ ಕಥಾನಕವನ್ನು ಯಾರಾದರೂ ನಿರೂಪಿಸಿದರೆ ಇದು ಜಾನಪದ ಶೈಲಿಯ ಕಥಾನಕ ಎಂದು ಒಪ್ಪಿಕೊಳ್ಳಬಹುದೆನಿಸುತ್ತದೆ. 

‘ಅಮೃತಪಥ’ ಎಂಬ ಈ ಆಧುನಿಕ ಮಹಾಕಾವ್ಯ ಒಂದು ಬಗೆಯ ಅನಿಯತ ಸರಳ ರಗಳೆಯಲ್ಲಿ, ಸರಳವಾದ ಗದ್ಯದಮತಹ ಭಾಷೆಯಲ್ಲಿ, ಆದರೆ ಸಂವೇದನಾ ಸೂಕ್ಷ್ಮತೆ ಮತ್ತು ಅಲಂಕಾರಗಳನ್ನು ಬಳಸಿಕೊಂಡು ನಿರೂಪಿಸಲ್ಪಟ್ಟಿದೆ. ಒಟ್ಟು 69 ಭಾಗಗಳಲ್ಲಿ 400ಕ್ಕಿಮತ ಹೆಚ್ಚುಪುಟಗಳಲ್ಲಿ ಕಥಾನಕ ವಿಸ್ತರಿಸಿದೆ. ಮಹಾಭಾರತದಲ್ಲಿ ಬರುವ ಕತೆಗಳನ್ನು ಬಳಸಿಕೊಳ್ಳುವ ಕವಿ, ಬಹಳ ಮುಖ್ಯವಾದ ಅಂಶದಲ್ಲಿಯೇ ಭಿನ್ನವಾದ ಕಥನವನವನ್ನು ಕಟ್ಟಿದ್ದಾರೆ.

ಕನಸಿನಂತಹ ಸ್ಥಿತಿಯಲ್ಲಿ

ಸಾವಿತ್ರಿ ಗಂಡನ ಪ್ರಾಣವನ್ನು ಯಮನಿಂದ ಮರಳಿಪಡೆದದ್ದೇ ಮೂಲ ಕಥನದಲ್ಲಿ ಪ್ರಮುಖವಾದದ್ದು. ಆದರೆ ಜಗದೀಶ್ ಅವರ ಕಾವ್ಯದಲ್ಲಿ ಹೀಗೆ ಯಮನ ಜತೆಗಿನ ಮುಖಾಮುಖಿ ಧ್ಯಾನಮಗ್ನಳಾಗಿದ್ದಾಗ, ಕನಸಿನಂತಹ ಸ್ಥಿತಿಯಲ್ಲಿ ಮಾತ್ರ ನಡೆಯುತ್ತದೆ. ಅಮೃತ ಪಥದಲ್ಲಿ ಸತ್ಯವಾನ್ ಒಂದು ವರ್ಷದಲ್ಲಿ ಸತ್ತು ಹೋಗುತ್ತಾನೆ. ಅವನು ಸಾಯುವುದು, ರಹಸ್ಯವಾಗಿ ರಾಜ್ಯಕ್ಕೆ ನುಗ್ಗಿದ ಈಗಿನ ಕಾಲದ ಭಯೋತ್ಪದಕರಂತಹ ದುಷ್ಟರ ವಿಷದ ಬಾಣಕ್ಕೆ ತುತ್ತಾಗಿ. ಅದೂ ಕೂಡ ಹಿಂದಿನಿಂದ ಬಿಟ್ಟ ಬಾಣ, ಹೇಡಿಗಳಾದ ವಿದ್ರೋಹಿಗಳದು. ಸಾವಿತ್ರಿ ಈ ವಂಚನೆಯಿಂದ ರೋಷತಪ್ತಳಾದರೂ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಲು ಸಂಕಲ್ಪಿಸುವುದ ರೊಂದಿಗೆ ಮೂಲಕಥೆಗಿಂತ ಭಿನ್ನವಾಗಿರುವ ಇನ್ನೊಂದು ಕಾವ್ಯ ಕೊನೆಯಾಗುತ್ತದೆ. ಅಂಶ, ಸತ್ಯವಾನನ ಮರಣಕ್ಕಿಂತ ಮುಂಚೆ ಸಾವಿತ್ರಿ ಗರ್ಭಿಣಿಯಾಗಿರುತ್ತಾಳೆ ಎನ್ನು ವುದು. ಹಾಗಾಗಿ ಸತ್ಯವಾನನ ಚೈತನ್ಯವನ್ನು ಕಾಲದಲ್ಲಿ ಮುಂದುವರಿಸಲು ಅವನ ಸಂತಾನ ಹುಟ್ಟುವುದೆನ್ನುವುದು ಕೂಡ ಸೂಚಿತವಾಗಿದೆ.

ನಿಯೋಗ ಪದ್ಧತಿ

ಸಾವಿತ್ರಿಯ ಗೆಳತಿ ರಾಜಿಯು ತನ್ನ ಮಗುವನ್ನು ತಾನು ಒಂದು ಗ್ರಾಮೀಣ ನಿಯೋಗ ಪದ್ಧತಿಯ ಪ್ರಕಾರ ಗಂಡನಲ್ಲದವನಿಂದ ಪಡೆದುದನ್ನು ಗೆಳತಿಗೆ ಹೇಳುತ್ತಾಳೆ. ರಾಜಿಯು ಮಕ್ಕಳಿಲ್ಲದವಳು, ಬಂಜೆ ಎಂದು ಹಂಗಿಸಲ್ಪಡುತ್ತಿದ್ದಾಗ ಗಂಗಮಜ್ಜಿ ಎಂಬ ಮುದುಕಿಯ ಸಲಹೆಯಂತೆ, ಮಕ್ಕಳಾಗದ ಹೆಂಗಸರು ಪರಪುರುಷರನ್ನು ಕೂಡಿ ಗರ್ಭಧರಿಸುವ ಅವಕಾಶ ಇರುವ, ಕಂಚುಕೋತ್ಸವ ಎಂಬ ಒಂದು ಬಗೆಯ ರತಿ ಉತ್ಸವದಲ್ಲಿ ಭಾಗವಹಿಸಿ ಪಡೆದ ಮಗು ಅವಳದು. ಸಾವಿತ್ರಿ, 'ನಿನ್ನ ಸಾಹಸಕ, ಧೈರ್ಯಕ ನನ್ನ ಹತ್ತಿರ ಪದವಿಲ್ಲಮ್ಮ' ಎನ್ನುತ್ತಾಳೆ. (ಪುಟ 182). ಇಲ್ಲಿ ಸಾವಿತ್ರಿಯ ಪಾತ್ರದ ಗೌರವಕ್ಕೆ ಚ್ಯುತಿಯು೦ಟಾಗಿದೆ ಎನ್ನುವ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ ಮಾತು ಸರಿಯೆನಿಸುತ್ತದೆ.

ಅಮೃತ ಪಥ ಮಹಾಕಾವ್ಯವು ಒಂದು ಕಡೆ ಸ್ತ್ರೀ ಕೇಂದ್ರಿತವಾದರೆ ಇನ್ನೊಂದು ಕಡೆ ಜನಪದ ಕೇಂದ್ರಿತವಾದ ಕಥನವಾಗಿದೆ. ಕೃತಿಯಲ್ಲಿ ನಾಯಕ - ನಾಯಕಿಯರು ಈ ನಗರದಲ್ಲಿ ಇರುವುದಕ್ಕಿಂತ ಹೆಚ್ಚು ಅರಣ್ಯದಲ್ಲಿ ಮತ್ತು ಆಶ್ರಮದಲ್ಲಿ ಇರುತ್ತಾರೆ = ಎನ್ನುವುದನ್ನೂ ಗಮನಿಸಬೇಕು. ಈ ಮಹಾಕಾವ್ಯದಲ್ಲಿ ಗ್ರಾಮ ಜೀವನದ ಸಹಜ ಬದುಕಿನ ಚಿತ್ರಗಳು ಚೆನ್ನಾಗಿವೆ. ಇದು ಆಧುನಿಕ ಕಾದಂಬರಿಯಂತ ಮುಖ್ಯ - ಪಾತ್ರದ ದೈನಂದಿನ ಜೀವನವನ್ನು ಸಹಜತೆಗಾಗಿ ಮತ್ತು ಸುತ್ತಲಿನ ಸಮಾಜದ ಕ್ರ ಮಗಳನ್ನು ಹೋಲಿಕೆಗಾಗಿ ಮತ್ತು ವೈದೃಶ್ಯಕ್ಕಾಗಿ ತಂದುಕೊಳ್ಳುತ್ತಾ ಪರಿಪುಷ್ಟವಾಗಿದೆ.

ಹಾಗೆ ನೋಡಿದರೆ ಪ್ರಾಚೀನ ಮಹಾಕಾವ್ಯಗಳ ಲಕ್ಷಣಗಳನ್ನು ನಾವು ಇಲ್ಲಿ ಕಾಣಲಾರವು. ಅದರ ಬದಲಿಗೆ ಆಧುನಿಕ ಕಾದಂಬರಿ ಪ್ರಕಾರದ ಲಕ್ಷಣಗಳನ್ನು ಗುರುತಿಸಬಹುದಾಗಿದೆ. ಹಾಗಾಗಿ ಪದ, ಸಾಲುಗಳಲ್ಲಿ ಎಂದೂ ಇದನ್ನು ಪರಿಶೀಲಿಸಬಹುದಾಗಿದೆ. ವಿ. ಮಾ ಜಗದೀಶ್ ಅವರು ಈ ಪ್ರಕಾರವನ್ನು ಪುರಾಣಕಥೆಗಳನ್ನು ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ, ಮರುನಿರೂಪಿಸುವಷ್ಟಕ್ಕೆ ತೃಪ್ತರಾಗದೆ ಆಧುನಿಕ ಕಾಲದ ಸಂವೇದನೆಗಳನ್ನು ಮತ್ತು ಆಶಯಗಳನ್ನು ಹೇಳಲು ಬಳಸಿಕೊಂಡು, ಆಧುನಿಕ ಪ್ರಜ್ಞೆಯೊಂದಿಗೆ ನಿರ್ವಹಿಸಿರುವುದು ಶ್ಲಾಘನೀಯ. 

(ಕೃಪೆ : ವಿಶ್ವವಾಣಿ, ಬರಹ : ಡಾ.ಬಿ. ಜನಾರ್ಧನ ಭಟ್)

Related Books