ಅಭಿಮನ್ಯು' ಮಹಾಭಾರತದ ಒಂದು ಪಾತ್ರ.. ಈ ಪಾತ್ರದ ಚಿತ್ರಣ ನೀಡುವ ಕೃತಿ ಇದು. ಲೇಖಕ ಶ್ರೀನಿವಾಸ ಉಡುಪ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ವೀರಪುರುಷ ಅಭಿಮನ್ಯುವಿನ ಕುರಿತಾಗಿ ಅತಿರಥ ಮಹಾರಥರ ಗಾಥೆಯಾದ ಮಹಾಭಾರತದಲ್ಲಿ ಕಣ್ಣು ಕೋರೈಸುವ ಸಿಡಿಲಮರಿ; ಘನಘೋರ ಕುರುಕ್ಷೇತ್ರ ಯುದ್ಧದಲ್ಲಿ ಕೌರವಸೇನೆಯ ಚಂಡಪ್ರಚಂಡ ಸೇನಾನಿಗಳನ್ನೆಲ್ಲ ಹಣ್ಣುಗಾಯಿ ನೀರುಗಾಯಿ ಮಾಡಿ, ಕಡೆಗೆ ಕುಟಿಲತೆಗೆ ಬಲಿಯಾದ ಮೀಸೆಯೂ ಮೂಡದ ಸಿಂಹಶಿಶು ಎಂದು ಲೇಖಕರು ವರ್ಣಿಸಿದ್ದಾರೆ. ಶತ್ರುಗಳ ಯಾವುದೇ ಭಯವಿಲ್ಲದ ಅಭಿಮನ್ಯು ಚಕ್ರವ್ಯೂಹ ಭೇದಿಸಲು ಯಾವ ರೀತಿ ವೀರಾವೇಷದಿಂದ ಹೊರಾಡಿದನು ಮತ್ತು ತನ್ನ ಪ್ರಾಣವನ್ನೂ ಲೆಕ್ಕಿಸದೆ ಶತ್ರುಗಳನ್ನು ಸದೆಬಡಿದು ಕೊನೆಗೆ ಅದೇ ಶತ್ರುಗಳು ಮೋಸದಿಂದ ಅಭಿಮನ್ಯುವನ್ನು ಕೊಂದ ಬಗೆಯನ್ನು ಲೇಖಕರು ಇಲ್ಲಿ ಸರಳ ಭಾಷೆಯಲ್ಲಿ ಪ್ರಸ್ತುತಪಡಿಸಿದ್ದಾರೆ.
©2024 Book Brahma Private Limited.