ಅಮೀಶ್ ತ್ರಿಪಾಠಿ ಅವರು ಲೇಖಕರು. ಮುಂಬೈ ಮೂಲದವರು. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಿಂದ ಪದವೀಧರರು. ಕಾಲ್ಪನಿಕ ಕಥೆಗಳನ್ನು ಬರೆಯುವುದರಲ್ಲಿ ಪರಿಣಿತರು. ಶಿವ, ನಂದಿ, ಸತಿ, ವೀರಭದ್ರ, ದಕ್ಷ ಹೀಗೆ ಇಂತಹ ಪುರಾಣಗಳ ಇಂತಹ ಹೆಸರಗಳನ್ನು ಬಳಸಿ ಅವರು ವಿನೂತನ ಮಾದರಿಯಲ್ಲಿ ಕಟ್ಟಿಕೊಟ್ಟ ಕಥೆಗಳು ಭಾರತೀಯ ವಿವಿಧ ಭಾಷೆಗಳಿಗೂ ಅನುವಾದವಾಗಿವೆ. ಶಿವ ಕುರಿತಂತೆ ಬರೆದ ಇವರನ್ನು ಪ್ರಸಿದ್ಧಿ ತಂದ ಸರಣಿಯಾಗಿದೆ. ಇವರ ಇಮ್ಮಾರ್ಟಲ್ಸ್ ಆಫ್ ಮೆಲುಹ ಕೃತಿಯು 12 ಭಾಷೆಗಳಲ್ಲಿ, ಸೀಕ್ರೆಟ್ ಆಫ್ ದಿ ನಾಗಾಸ್-7 ಭಾಷೆಗಳಲ್ಲಿ ಹಾಗೂ ಓತ್ ಆಫ್ ದಿ ವಾಯುಪುತ್ರಾಸ್ -3 ಭಾಷೆಗಳಲ್ಲಿ ಅನುವಾದಗೊಂಡಿದೆ. ಈ ಮೂರೂ ಕೃತಿಗಳನ್ನು ‘ಶಿವ ಟ್ರೈಲಾಜಿ’ ಎಂದು ಹೆಸರಿಸಲಾಗುತ್ತಿದೆ.
ಪ್ರಶಸ್ತಿ-ಪುರಸ್ಕಾರಗಳು: ಸೊಸೈಟಿ ಯಂಗ್ ಅಚೀವರ್ಸ್ ಅವಾರ್ಡ್ ಫಾರ್ ಲಿಟರೇಚರ್, ಇಂಡಿಯಸ್ ನ್ಯೂ ಐಕಾನ್ಸ್, ಸೆಲಬ್ರಿಟೀಸ್ ಟಾಪ್ 100 ಲಿಸ್ಟ್