‘ವಿದಿಶಾ ಪ್ರಹಸನ’ ಕವಿ ಕಾಲಿದಾಸನ ಮಾಲವಿಕಾಗ್ನಿಮಿತ್ರಮ್ ದ ರಂಗಾನುವಾದ. ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಅನುವಾದಕರು. ದೊಡ್ಡಾಟದ ಶೈಲಿ ಮತ್ತು ಗತ್ತುಗಳನ್ನು ಅಳವಡಿಸಿಕೊಂಡ ಮರು ಬರವಣಿಗೆ. ಕಾಲಿದಾಸ ತನ್ನ ಕಾಲದಲ್ಲಿ ಆಸ್ಥಾನದಲ್ಲಿ ಕಂಡ ಮದನಾಟ, ಗುಪ್ತ ಕಾಮವ್ಯವಹಾರ, ಅರಾಜಕತೆ, ಪ್ರಜೆಗಳ ಅಸಹಾಯಕ ಮೌನಗಳನ್ನು ಒಂದು ಸಹಜ ಚಿತ್ರದಂತೆ ಪ್ರಹಸನಾತ್ಮಕವಾಗಿ ಬಿಂಬಿಸುತ್ತಾನೆ. ಈ ಕೃತಿಯಲ್ಲಿ ಈ ಅಂಶವು ವಿಮರ್ಶೆಗೊಳಪಟ್ಟು, ಸಮಕಾಲೀನ ಸಂದರ್ಭದ ಸಾಮಾಜಿಕ, ರಾಜಕೀಯ ಅವಾಂತರಗಳಿಗೆ ಕನ್ನಡಿ ಹಿಡಿಯುತ್ತದೆ.
©2024 Book Brahma Private Limited.