ಲೇಖಕ ಜೆ.ಎಂ. ಸಿಂಗೆ ಅವರ ಐರಿಷ್ ಇಂಗ್ಲಿಷ್ ಭಾಷೆಯ ‘ದಿ ವೆಲ್ ಆಫ್ ದಿ ಸೇಂಟ್ಸ್; ಎಂಬ ನಾಟಕವನ್ನು ಲೇಖಕ ಡಾ. ಬಸವರಾಜ ನಾಯ್ಕರ್ ಅವರು ‘ಜೋಗಿ ಬಾವಿ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದರು. ನಂತರ ಇದೇ ಕನ್ನಡ ನಾಟಕವನ್ನು ಭಾರತೀಯ ಸಂಸ್ಕೃತಿ ವಿಶೇಷವಾಗಿ ಹಿಂದೂ (ವೀರಶೈವ) ಸಂಸ್ಕೃತಿಗೆ ರೂಪಾಂತರಿಸಿ ಇದೇ ಲೇಖಕರು ‘ದಿ ಹೋಲಿ ವಾಟರ್’ ಶೀರ್ಷಿಕೆಯಡಿ ಇಂಗ್ಲಿಷಿಗೆ ಅನುವಾದಿಸಿದರು. ಸಂಸ್ಕೃತಿಯನ್ನು ಕೇಂದ್ರವಾಗಿಸಿಕೊಂಡು ಒಂದು ಕೃತಿಯನ್ನು ಮತ್ತೊಂದು ಭಾಷೆಗೆ ಅನುವಾದಿಸುವುದು, ರೂಪಾಂತರಿಸುವುದು ಕಷ್ಟದ ಕೆಲಸವೇ ಆಗಿದೆ. ಈ ಹಿನ್ನೆಲೆಯಲ್ಲಿ, ಅನುವಾದಕರಿಗೆ, ಸಾಹಿತ್ಯಾಸಕ್ತರಿಗೆ, ವಿಮರ್ಶೆ ಆಸಕ್ತರಿಗೆ ಅಧ್ಯಯನದ ದೃಷ್ಟಿಯಿಂದ ಈ ಕೃತಿ ಉತ್ತಮ ಆಕರವಾಗಿದೆ. ಸಂಸ್ಕೃತಿಯ ರೂಪಾಂತರಕ್ಕೆ ಸಂಬಂಧಿಸಿದ ವಿಶೇಷವಾಗಿ ಈ ಕೃತಿಯ ಅನುವಾದಕರು ಎದುರಿಸುವ ಸವಾಲುಗಳ ಬಗ್ಗೆ ಭಾರತದ ವಿಮರ್ಶಕರು ಹಲವಾರು ವಿಮರ್ಶೆಗಳನ್ನು ಬರೆದಿದ್ದರು. ಜೋಗಿಬಾವಿ ಕೃತಿ ಪ್ರಕಟಗೊಂಡಾಗ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಪದವಿ ಕೋರ್ಸ್ಗೂ ಪಠ್ಯವಾಗಿತ್ತು.
©2024 Book Brahma Private Limited.