ಸಿರಿಗನ್ನಡ ಅರ್ಥಕೋಶ

Author : ಶಿವರಾಮ ಕಾರಂತ

Pages 524

₹ 295.00




Year of Publication: 2012
Published by: ಎಸ್.ಬಿ.ಎಸ್. ಪಬ್ಲಿಷರ್ಸ್‌
Address: ರೈಲ್ವೆ ಪ್ಯಾರಲಲ್ ರಸ್ತೆ,  , ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 9980513242

Synopsys

ಶಿವರಾಮ ಕಾರಂತರ ಕೃತಿ-ಸಿರಿಗನ್ನಡ ಅರ್ಥಕೋಶ. ಕನ್ನಡ-ಕನ್ನಡ ನಿಘಂಟುವಿನ ಕೊರತೆ ಇದ್ದ ಕಾಲದಲ್ಲಿ ಶಿವರಾಮ ಕಾರಂತರು ಇಂತಹ ಪ್ರಯತ್ನಕ್ಕೆ ಇಳಿದಿದ್ದು, ವಿದ್ಯಾರ್ಥಿ-ಬೋಧಕರಿಗೆ ತೊಂದರೆಯಾಗಬಾರದು ಎಂಬ ಕಳಕಳಿಯಿಂದ ಕೆಲಸ ಮಾಡಿದ್ದು ಸ್ಪಷ್ಟವಿದೆ. 

ತಮ್ಮ ನಿರಂತರ ಅನ್ವೇಷಣೆಯಿಂದ ಸೃಜನಶೀಲ ಸಾಹಿತ್ಯ, ವಿಚಾರ ಸಾಹಿತ್ಯಗಳೆರಡರಲ್ಲೂ ಪಾಂಡಿತ್ಯ ಸಾಧಿಸಿದ ಶಿವರಾಮ ಕಾರಂತರು ಸಂಪಾದಿಸಿದ ಈ ಅರ್ಥಕೋಶದಲ್ಲಿ ಸುಮಾರು 25 ಸಾವಿರ ಕನ್ನಡ ಶಬ್ಧಗಳಿಗೆ ಕನ್ನಡದಲ್ಲಿ ಅರ್ಥ ವಿವರಣೆ ಇದೆ. ಪ್ರಾದೇಶಿಕವಾಗಿ ಬಳಕೆಯಲ್ಲಿರುವ ಶಬ್ದಗಳು ಇಲ್ಲಿವೆ. ಪ್ರಾಚೀನ ಸಾಹಿತ್ಯ ಕೃತಿಗಳ ಅಧ್ಯಯನಕ್ಕೂ ಈ ನಿಘಂಟು ಉತ್ತಮ ಮಾರ್ಗದರ್ಶನ ನೀಡುವಂತಿದೆ. ಪುರಾಣ, ಕಾಲ್ಪನಿಕ, ವೈದಿಕ ಶಬ್ದಗಳಿಗೂ ಅರ್ಥಗಳನ್ನು ನೀಡಲಾಗಿದೆ. ಹೊಸಗನ್ನಡ-ಹಳಗನ್ನಡದ ವಿದ್ಯಾರ್ಥಿಗಳಿಗೂ ಸಹಾಯಕವಾಗಿದೆ. 

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಶಿವರಾಮ ಕಾರಂತರೇ 1941ರಲ್ಲಿ (ಪುಟ: 560) ಈ ನಿಘಂಟುವನ್ನು ಪ್ರಕಟಿಸಿದ್ದರು. ಬೆಂಗಳೂರಿನ ಎಸ್ ಬಿಎಸ್ ಪ್ರಕಾಶನವು 1990ರಲ್ಲಿ ನಾಲ್ಕನೇ ಆವೃತ್ತಿಯಾಗಿ ಈ ನಿಘಂಟುವನ್ನು ಪ್ರಕಟಿಸಿತ್ತು. 

 

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books