‘ಸೀತಾ ಪರಿತ್ಯಾಗ ಪ್ರಸಂಗ’ (ಲಕ್ಷೀಶ ಕವಿಯ ಜೈಮಿನಿ ಭಾರತ ಓದು) ಸಿ.ಪಿ ನಾಗರಾಜ ಅವರ ಕೃತಿಯಾಗಿದೆ. ಇದಕ್ಕೆ ಎಸ್.ವಿ.ಪ್ರಭಾವತಿ ಅವರ ಬೆನ್ನುಡಿ ಬರಹವಿದೆ; ಮಹಾಭಾರತದೊಳಗೊಂದು ರಾಮಾಯನ ಹೌದು. ರಾಮಾಯಣವು ಮಹಾಭಾರತಕ್ಕಿಂತ ಪ್ರಾಚೀನ. ಮಹಾಭಾರತದ ಅನೇಕ ಉಪಾಖ್ಯಾನಗಳಲ್ಲಿ ರಾಮಾಯಣವೂ ಒಂದು. ಆದರೆ ಲಕ್ಷ್ಮೀಶನ ಭಾರತದ ಒಳಗೆ ರಾಮಾಯಣದ ಸೀತಾ ಪರಿತ್ಯಾಗದ ಸೊಗಸೇ ಬೇರೆ. ಇಡೀ ಕಾವ್ಯದಲ್ಲಿ ಇದು ಶ್ರೇಷ್ಟಮಟ್ಟದ ಕಾವ್ಯ ಭಾಗ ಎಂದು ದಾಖಲಾಗಿದೆ. ಕುರುಕ್ಷೇತ್ರ ಯುದ್ಧ ಮುಗಿದ ನಂತರ ಬಂಧು ಬಾಂಧವರ ಹತ್ಯೆಯಿಂದ ನೊಂದ ಧರ್ಮರಾಯನು ಆ ಪಾಪವನ್ನು ಕಳೆದುಕೊಳ್ಳು ಅಶ್ವಮೇಧಯಾಗವನ್ನು ಮಾಡುವಂತೆ ಋತ್ಪಿಜರು ಸೂಚಿಸುತ್ತಾರೆ. ಯುಗದ ಕುದುರೆಯ ಜೊತೆಯಲ್ಲಿ ಹೊರಟ ಅರ್ಜುನನನ್ನು ಬಬ್ರುವಾಹನ ತಡೆದಾಗ, ಹಿಂದೆ ಕೂಡ ಈ ರೀತಿಯಲ್ಲಿ ತಂದೆ ಮಕ್ಕಳಿಗೆ ಯುದ್ಧವಾಗಿತ್ತು ಎಂದು ಬಿಡುತ್ತಾರೆ. ಕತೆ ಹೇಳುತ್ತಿದ್ದ ವೈಶಂಪಾಯನರು ಅಗಜನಮೇಜಯನು ‘ಅದೇನು ಕತೆ’ ಎಂದು ಒತ್ತಾಯಿಸಿದಾಗ ಬರುವಂಥದು ರಾಮಾಯಣದ ಸೀತಾ ಪರಿತ್ಯಾಗ ಮತ್ತು ಲವಕುಶರು ರಾಮನೊಂದಿಗೆ ಹೋರಾಡಿದ ಕತೆ ಇದಾಗಿದೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.
©2024 Book Brahma Private Limited.