ಪಾರಮಾರ್ಥ ಪದಕೋಶ

Author : ಆರ್. ಶೇಷಶಾಸ್ತ್ರಿ

Pages 324

₹ 450.00




Year of Publication: 2014
Published by: ಆರ್. ಶೇಷಶಾಸ್ತ್ರಿ
Address: ಅನಂತಪುರ

Synopsys

ಡಾ. ಪೊತ್ತೂರಿ ವೆಂಕಟೇಶ್ವರ ರಾವ್ ಅವರ ತೆಲುಗು ಮೂಲದ ಈ ಕೃತಿಯನ್ನು ಲೇಖಕ ಡಾ. ಆರ್. ಶೇಷಶಾಸ್ತ್ರಿ ಹಾಗೂ ಬಿ.ಎನ್. ಶ್ರೀನಿವಾಸ ಅವರು ಜಂಟಿಯಾಗಿ ಕನ್ನಡಕ್ಕೆ ಅನುವಾದಿಸಿದ ಕೃತಿ-ಪಾರಮಾರ್ಥಿಕ ಪದಕೋಶ. ಸಾಮಾನ್ಯ ನಿಘಂಟುಗಳನ್ನು ರಚಿಸುವುದು ಹಿಂದಿನಿಂದಲೂ ಇದೆ. ಆದರೆ, ಜ್ಞಾನಕೋಶಗಳು ವಿಸ್ತಾರವಾದಂತೆ ಆಯಾ ವಿಷಯಕ್ಕೆ ಸಂಬಂಧಿಸಿ ಪದಕೋಶಗಳು ಬರಲು ಆರಂಭಿಸಿದ್ದು, ಈಗ ಪ್ರತಿ ಕ್ಷೇತ್ರವೂ ಒಂದೊಂದು ವಿಶೇಷ ಕ್ಷೇತ್ರವಾಗಿ ಅಧ್ಯಯನ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಹೀಗಾಗಿ, ಆಯಾ ವಿಷಯಗಳ ಪದಕೋಶ ರಚನೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಅಧ್ಯಾತ್ಮವೂ ಒಂದು ಆಸಕ್ತಿಕರ ಜ್ಞಾನ ಶಾಖೆ. ಅದಕ್ಕೆ ಸಂಬಂಧಿಸಿದ ಪದಕೋಶವು ಈ ಕೃತಿ. ಕನ್ನಡದಲ್ಲಿಯಂತೂ ಇಂತಹ ಕೃತಿಯ ಕೊರತೆಯನ್ನು ನೀಗಿಸಿದೆ.

About the Author

ಆರ್. ಶೇಷಶಾಸ್ತ್ರಿ

ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಲು ಶ್ರಮಿಸಿದ ಬಹುಭಾಷಾ ಪಂಡಿತರ ಪರಂಪರೆಗೆ ಸೇರಿದವರು ಡಾ. ಆರ್. ಶೇಷಶಾಸ್ತ್ರಿ. ಅಧ್ಯಾಪಕ, ಲೇಖಕ, ಅನುವಾದಕ, ಸಂಶೋಧಕರಾಗಿ ಅದರದ್ದು ಬಹುಮುಖ ಪ್ರತಿಭೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಂತೇಕಲ್ಲಹಳ್ಳಿ ಶೇಷಶಾಸ್ತ್ರಿಗಳ ಹುಟ್ಟೂರು. ಬೆಂಗಳೂರು ವಿವಿಯಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ ಪದವಿ ಪಡೆದ ಅವರು ಸಂಶೋಧಕ ಸಹಾಯಕರಾಗಿ ವೃತ್ತಿ ಬದುಕನ್ನು ಆರಂಭಿಸಿದರು. ಆಂಧ್ರಪ್ರದೇಶದ ಅನಂತಪುರದಲ್ಲಿರುವ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಕನ್ನಡ ಅಧ್ಯಾಪಕ, ರೀಡರ್, ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ಆನಂತರದಲ್ಲಿ ತೆಲುಗು ವಿಭಾಗದ ಮುಖ್ಯಸ್ಥರಾದರು ಜೊತೆಗೆ, ಕುಪ್ಪಂನ ದ್ರಾವಿಡ ವಿವಿಯಲ್ಲಿ ಕನ್ನಡ ಮತ್ತು ಅನುವಾದ ವಿಭಾಗದ ಸ್ಥಾಪಕ ...

READ MORE

Related Books