ಈಡಿಪಸ್ ಮತ್ತು ಅಂತಿಗೊನೆ

Author : ವಿಜಯಾ ಸುಬ್ಬರಾಜ್

Pages 132

₹ 125.00




Year of Publication: 2021
Published by: ಸೃಷ್ಟಿ ಪಬ್ಲಿಕೇಷನ್ಸ್,
Address: ವಿಜಯನಗರ, ಬೆಂಗಳೂರು 560040
Phone: 080- 23153558

Synopsys

ಖ್ಯಾತ ಲೇಖಕಿ ಡಾ. ವಿಜಯಾ ಸುಬ್ಬರಾಜ್ ಅವರು ಗ್ರೀಕ್ ಮಹಾಕವಿ ಸಾಫೋಕ್ಲಿಸ್ ಅವರು ಬರೆದ ಎರಡು ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಿದ ಕೃತಿ ಇದು-ಈಡಿಪಸ್ ಮತ್ತು ಅಂತಿಗೊನೆ. ದೊರೆ ಈಡಿಪಸ್ ಎಂಬುದು ಒಂದು ವಿಸ್ಮಯಭರಿತ ನಾಟಕ. ಮನುಷ್ಯ ಶೋಧದ ಚಿತ್ರಣವಿದೆ. ದ್ವಂದ್ವಗಳನ್ನು ಬಳಸಿಕೊಂಡು ಹೆಣೆದ ಸುಂದರ ನಾಟಕವಿದು. ವ್ಯಕ್ತಿ -ವ್ಯಕ್ತಿ ಮಾತ್ರವಲ್ಲ; ವ್ಯಕ್ತಿ ಮತ್ತು ಆತನ ಅಂತರಂಗದ ವೈರುಧ್ಯಗಳನ್ನು ಈ ಎರಡೂ ನಾಟಕಗಳು ಅಭಿವ್ಯಕ್ತಿಸುತ್ತವೆ. ಈ ನಾಟಕಗಳು ಕನ್ನಡ ಸಾಹಿತ್ಯದಲ್ಲಿ ಪಿ. ಲಂಕೇಶ್ ಒಳಗೊಂಡಂತೆ ಹಲವರು ಅನುವಾದಿಸಿದ್ದಾರೆ. ವಿಜಯಾ ಸುಬ್ಬರಾಜ್ ಅವರು ತಮ್ಮ ಭಾಷಾ ಶೈಲಿ, ವಸ್ತುವಿನ ಗ್ರಹಿಕೆಯಿಂದ ವಿಭಿನ್ನವಾಗಿ ಕೃತಿಯನ್ನು ಅನುವಾದಿಸಿದ್ದು, ಓದುಗರ ಗಮನ ಸೆಳೆದಿದ್ದಾರೆ.

About the Author

ವಿಜಯಾ ಸುಬ್ಬರಾಜ್
(20 April 1947)

ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್‌ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...

READ MORE

Related Books