ನಾಗ್ದಾಳೆ

Author : ಚೀಮನಹಳ್ಳಿ ರಮೇಶಬಾಬು

Pages 116

₹ 120.00




Year of Publication: 2019
Published by: ಅನಿಮ ಪುಸ್ತಕ
Address: ಚೀಮನಹಳ್ಳಿ, ಐಮರೆಡ್ಡಿಹಳ್ಳಿ(ಪೋಸ್ಟ್), ಚಿಂತಾಮಣಿ.

Synopsys

‘ನಾಗ್ದಾಳೆ’ ಕವಿ, ಕಥೆಗಾರ ಚೀಮನಹಳ್ಳಿ ರಮೇಶ್ ಬಾಬು ಅವರ ಖಂಡಕಾವ್ಯ- ಆಧುನಿಕ ಜಗತ್ತಿನ ಗಿಲೀಟುಗಳು ಅಸಲಿ ಕವಿಯ ಮುಂದೆ ನಡೆಯುವುದಿಲ್ಲ ಸಿದ್ಧಮಾದರಿಗಳನ್ನು ಮುರಿಯುವ ಸಾಹಸಗಳು ಆಗಾಗ ಸಂಭವಿಸುತ್ತವೆ. ಅಂಥದ್ದೊಂದು ಪ್ರಯತ್ನವೇ ಕಥೆಗಾರ ಮತ್ತು ಕವಿ ಚೀಮನಹಳ್ಳಿ ರಮೇಶಬಾಬು ಅವರ ಖಂಡಕಾವ್ಯ ‘ನಾಗ್ದಾಳೆ’. ಮಹಾಕಾವ್ಯಗಳ ಮಧ್ಯಸ್ತರಗಳೆಂದು ಈ ಖಂಡಕಾವ್ಯಗಳನ್ನು ಹೇಳಲಾಗುತ್ತದೆ. ಓದಬಹುದು, ಗೇಯತೆಯೂ ಉಂಟು. 

ಈ ನಾಗ್ದಾಳೆ, ಅದೇ ಪಾಪಸ್ ಕಳ್ಳಿ, ಕತ್ತಾಳೆ ಎಲ್ಲಾ ಊರಿನಲ್ಲಿಯೂ ಸಾಮಾನ್ಯ. ಬರಗಾಲದಲ್ಲೂ ಬಗ್ಗದ ನಾಗ್ದಾಳೆಯ ಮೈತುಂಬಾ ಮುಳ್ಳು. ಹಣ್ಣು ಬಿಡಿಸಿಕೊಂಡರೆ, ಅದರೊಳಗೊಂದು ಗೊಡ್ಡು ಮುಳ್ಳು. ಹೇಗೋ ತಿರುಳನ್ನು ಬಿಡಿಸಿಕೊಂಡು ಬಾಯಲ್ಲಿಟ್ಟುಕೊಂಡರೆ ರುಚಿಗೆ ನಾಲಿಗೆಯು ಸಲಾಂ ಹೇಳುತ್ತದೆ. ಇಂಥ ನಾಗ್ದಾಳೆಯನ್ನು ರೂಪಕವಾಗಿಟ್ಟುಕೊಂಡು ಚೀಮನಗಳ್ಳಿ ಅವರು ಖಂಡಕಾವ್ಯವನ್ನು ಕಟ್ಟಿದ್ದಾರೆ. ಊರ ಹೊರಗಿನ ನಾಗ್ದಾಳೆಯನ್ನಷ್ಟೇ ನಾವುಗಳು ಕಂಡಿದ್ದರೆ, ಇಲ್ಲಿ ಕವಿ ಊರೊಳಗಿನ ಅಸಂಖ್ಯ ನಾಗ್ದಾಳೆಗಳು ಸಾರ್ಥಕ ಬದುಕನ್ನು ಸವೆಸಿರುವುದನ್ನು, ಬಾಳುತ್ತಲೂ ಇರುವುದನ್ನು ತೋರಿಸಿದ್ದಾರೆ.

About the Author

ಚೀಮನಹಳ್ಳಿ ರಮೇಶಬಾಬು
(10 July 1974)

ಸಂಶೋಧನಾ ವಿಜ್ಞಾನಿಯಾಗಿರುವ ಚೀಮನಹಳ್ಳಿ ರಮೇಶಬಾಬು ಚಿಂತಾಮಣಿ  ತಾಲ್ಲೂಕಿನ ಚೀಮನಹಳ್ಳಿಯವರು. ‘ಪ್ರಶ್ನೆ ಮತ್ತು ದೇವರು’, ‘ಎರಡು ಲೋಟಗಳು’, ‘ಮಾಯಾ ಸರೋವರ’ ಎಂಬ ಕವಿತಾ ಸಂಗ್ರಹಗಳನ್ನು ‘ನಾಗ್ದಾಳೆ’ ಎಂಬ ಖಂಡಕಾವ್ಯವನ್ನು ‘ಹಸ್ತಬಲಿ’ ಎಂಬ ಕಥಾ ಸಂಕಲನ ಹಾಗು ‘ಹದ’, ‘ಬಲಿಹಾರ’, ‘ಟೈರ್ಸಾಮಿ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ‘ಕಾಡು ಹುವ್ವು’ ಇವರ ಸಂಪಾದಕತ್ವದಲ್ಲಿ ಬಂದಿರುವ ಅನುವಾದಿತ ಕವಿತೆಗಳ ಸಂಗ್ರಹ. ಮಾಸ್ತಿ ಕಾದಂಬರಿ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಬೆಟಗೆರಿ ಕೃಷ್ಣಶರ್ಮ ಕಾದಂಬರಿ ಪ್ರಶಸ್ತಿ, ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ, ವೀಚಿ ಉದಯೋನ್ಮುಖ ಪ್ರಶಸ್ತಿ, ಅರಳು ಸಾಹಿತ್ಯ ಪ್ರಶಸ್ತಿ ಸೇರಿದಂತೆ ಇನ್ನೂ ಹಲವು ...

READ MORE

Related Books