‘ತ್ರೀ ಪೆನ್ನಿ ಅಪೇರಾ’ ಬ್ರೆಕ್ಟ್ ನ ಮುಖ್ಯ ನಾಟಕಗಳಲ್ಲಿ ಒಂದು. ಇದನ್ನು `ಮೂರು ಕಾಸಿನ ಸಂಗೀತ ನಾಟಕ’ ಶೀರ್ಷಿಕೆಯಡಿ ಕೆ.ವಿ. ಸುಬ್ಬಣ್ಣ ಅವರ ಅನುವಾದಿತ ನಾಟಕ ಸಂಕಲನವಾಗಿದೆ. ಎಪಿಕ್ ನಾಟಕ ಶೈಲಿಯ ಮೊದಲ ಹಾಗೂ ಉತ್ಕೃಷ್ಟ ನಾಟಕ. 18 ನೇ ಶತಮಾನದ ಇಂಗ್ಲೆಂಡ್‍ನ ಜಾನ್ ಗೇ ಎಂಬಾತ ಬರೆದ ಬೆಗ್ಗರ್ಸ್ ಅಪೇರಾವನ್ನು ಬಹುಮಟ್ಟಿಗೆ ಆಧರಿಸಿದ ಈ ನಾಟಕ, ಅಂತಿಮವಾಗಿ ಅದಕ್ಕಿಂತ ತೀರ ಬೇರೆಯಾದ, ಬ್ರೆಕ್ಟ್ ನ ಸ್ವಂತದ ದರ್ಶನವನ್ನು ಬಿಂಬಿಸುವ ಅನನ್ಯ ಕೃತಿ ಇದು. ಜಗತ್ತಿನಾದ್ಯಂತ ಅಸಂಖ್ಯ ಭಾಷೆಗಳಲ್ಲಿ ಅನುವಾದಗೊಂಡ ಈ ನಾಟಕವು , ಅನೇಕ ಕಡೆಗಳಲ್ಲಿ ಪ್ರದರ್ಶನ ಗೊಂಡಿರುತ್ತದೆ. ಪ್ರೇಮ ದಾಂಪತ್ಯ ಕರುಣಗಳಂಥ ಮೂಲಭೂತ ಮೌಲ್ಯಗಳ ಡಾಂಭಿಕ ನಟನೆಯಾಗುವ ದುರಂತವನ್ನು ಕಂಡು ಬ್ರೆಕ್ಟ್ ಭಾವುಕನಾಗಿ ಅಳುವುದಿಲ್ಲ; ಗಹಗಹಿಸಿ ನಗುತ್ತಾನೆ. ಈ ಅಪಮೌಲ್ಯಕ್ಕೆ ಕಾರಣವಾದ ಬಂಡವಾಳಶಾಹಿ ಸಂಸ್ಕೃತಿ ಚರಿತ್ರೆಯ ಕೊನೆಯ ಘಟ್ಟವಲ್ಲ, ಮನುಷ್ಯನ ಸ್ಥಾಯೀ ಸ್ಥಿತಿಯಲ್ಲ ಎಂಬುದು ಬ್ರೆಕ್ಟ್ ನ ವಿಶ್ವಾಸ ಎಂಬುದು ಈ ಕೃತಿಯಲ್ಲಿದೆ.
©2024 Book Brahma Private Limited.