‘ಲೋಕೋತ್ತಮೆ ಮತ್ತು ಕಾಲಯಾತ್ರೆ’ ಕೃತಿಯು ಚನ್ನಕೇಶವ, ವಿಶಾಲಾ ವಾರಣಾಶಿ ಹಾಗೂ ಮೀರಾ ಚಕ್ರವರ್ತಿ ಅವರ ನಾಟಕಸಂಕಲನವಾಗಿದೆ. ಈ ನಾಟಕವು ಸುಮಾರು ಕ್ರಿ.ಪೂ 411ರಲ್ಲಿ ಗ್ರೀಕ್ ನಾಟಕಕಾರ ಅರಿಸ್ಟೋಫಿನಿಸ್ನಿಂದ ರಚಿತವಾಗಿದೆ. ಇಲ್ಲಿ ನೀಡಿರುವ ಮಾಹಿತಿಯಂತೆ ಸ್ಪಾರ್ಟಾ ಹಾಗೂ ಅಥೆನ್ಸ್ ನಗರಗಳ ನಡುವೆ ನಿಯಮಿತವಾಗಿ ನಡೆಯುತ್ತಿದ್ದ ಯುದ್ಧಗಳಿಂದ ಕಂಗೆಟ್ಟಿದ್ದ ಆ ಎರಡೂ ನಗರಗಳ ಹೆಣ್ಣು ಮಕ್ಕಳು ಲೈಸಿಸ್ಟ್ರಾಟ ಎಂಬ ಹೆಣ್ಣುಮಗಳ ನೇತೃತ್ವದಲ್ಲಿ ಒಂದು ಕ್ರಾಂತಿಕಾರಕ ನಿರ್ಧಾರಕ್ಕೆ ಬರುತ್ತಾರೆ. ಯುದ್ಧ ನಿಲ್ಲಿಸಿ ಎರಡೂ ನಗರಗಳು ಶಾಂತಿಯ ಒಪ್ಪಂದಕ್ಕೆ ಬರುವವರೆಗೂ ತಾವುಗಳು ಯಾರೂ ತಮ್ಮ ತಮ್ಮ ಗಂಡಂದಿರೊಂದಿಗೆ ಹಾಸಿಗೆಯನ್ನು ಹಂಚಿಕೊಳ್ಳುವುದಿಲ್ಲ ಎಂದು ತೀರ್ಮಾನಿಸಿ ಊರಿನ ಹಣಕಾಸಿನ ಸೌಧವನ್ನು ವಶಪಡಿಸಿಕೊಂಡು ಎಲ್ಲ ಹೆಂಗಸರೂ ಅಲ್ಲಿ ಸೇರಿಕೊಂಡು ಪ್ರತಿಭಟಿಸತೊಡಗುತ್ತಾರೆ. ಹೆಂಗಸರು ಮಾಡಿದಂತಹ ಈ ವಿಚಿತ್ರ ಪ್ರತಿಭಟನೆಯನ್ನು ವಿಧಿ ಇಲ್ಲದೆ ಒಪ್ಪುವಂತಹ ಗಂಡಸರು ಶಾಂತಿ ಒಪ್ಪಂದಕ್ಕೆ ಒಪ್ಪಿ ಯುದ್ದದಿಂದ ಹಿಂದೆಸರಿಯುತ್ತಾರೆ. ಹೀಗೆ ಇಂತಹ ಅನೇಕ ವಿಚಾರಗಳನ್ನು ಕಟ್ಟಿಕೊಡುವ ಈ ನಾಟಕವು ಬಹಳ ಭಿನ್ನವಾಗಿ ಕಾಣಿಸುತ್ತದೆ.
©2024 Book Brahma Private Limited.