ಕೃಷಿಗೆ ಸಂಬಂಧಿಸಿದ ಪರಿಭಾಷೆಗಳನ್ನು ಕನ್ನಡಿಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಹೆಚ್ಚು ಶ್ರಮ ವಹಿಸಿದೆ. ಅದರ ಒಂದು ಫಲವೇ ’ಕೃಷಿ ರಸಾಯನಶಾಸ್ತ್ರ ಪಾರಿಭಾಷಿಕ ಶಬ್ದಕೋಶ’.
ಕೃಷಿ ವಲಯಕ್ಕೂ ರಸಾಯನಶಾಸ್ತ್ರಕ್ಕೂ ಪರಸ್ಪರ ನಂಟು. ಮಣ್ಣು, ಗಿಡ-ಮರ-ಬಳ್ಳಿಗಳ ರಾಸಾಯನಿಕ ಸಂಯೋಜನೆಯನ್ನು ಅರ್ಥ ಮಾಡಿಕೊಳ್ಳಲು ಇಂತಹ ನಿಘಂಟುಗಳು ಉಪಯುಕ್ತ. ಕೃಷಿ ಕ್ಷೇತ್ರಾಧಿಕಾರಿಗಳು, ಪ್ರಯೋಗಾಲಯ ತಜ್ಞರು, ಕೃಷಿ ವಿಜ್ಞಾನಿಗಳು, ಕೃಷಿ ವಿಜ್ಞಾನದ ವಿದ್ಯಾರ್ಥಿಗಳು, ಸಂಶೋಧಕರು ಮುಂತಾದವರ ಬಳಿ ಇರಲೇಬೇಕಾದ ಶಬ್ದಕೋಶ ಇದು.
©2024 Book Brahma Private Limited.