ಹೆಸರಾಂತ ಪತ್ರಕರ್ತ, ಲೇಖಕ, ಕಥೆಗಾರ ಖುಷ್ವಂತ್ ಸಿಂಗ್ ಅವರ ’ಟ್ರೈನ್ ಟು ಪಾಕಿಸ್ತಾನ್’ ಕಾದಂಬರಿ ಆಧಾರವಾಗಿಟ್ಟುಕೊಂಡು ಕವಿ, ಕಥೆಗಾರ, ಅನುವಾದಕರಾದ ಚಿದಾನಂದ ಸಾಲಿಯವರು ಕನ್ನಡದಲ್ಲಿ ’ಕರುಳ ತೆಪ್ಪದ ಮೇಲೆ’ ಎಂಬ ನಾಟಕ ರೂಪವನ್ನು ಕಟ್ಟಿಕೊಟ್ಟಿದ್ದಾರೆ.
ಸ್ವತಃ ಕವಿಯಾದ ಸಾಲಿಯವರು ಕೃತಿಯನ್ನು ಗ್ರಹಿಸಿ ಅದರ ಪ್ರಮುಖ ವಸ್ತುವನ್ನು ನಾಟಕ ಪ್ರಯೋಗದಲ್ಲಿ ದೃಶ್ಯವಾಗಿಸಿದ್ದಾರೆ. ನಾಟಕ ಬಯಸುವ ಪ್ರಯೋಗಗುಣದ ತಂತ್ರಗಳನ್ನು ಸಾಧಿಸುವಲ್ಲಿಯೂ ಕೃತಿ ಯಶಸ್ವಿಯಾಗಿದೆ.
©2024 Book Brahma Private Limited.