ಲೇಖಕ ಕೆ.ವಿ. ಅಕ್ಷರ ಅವರು ಬರೆದ ಕೃತಿ-ಕಡುಗಲಿಯ ನಿಡುಗಾಥೆ. ಸಂಸ್ಕೃತ ಕವಿ ಭವಭೂತಿಯ ‘ಮಹಾವೀರ ಚರಿತ’ ನಾಟಕವನ್ನು ಲೇಖಕರು ಕನ್ನಡಕ್ಕೆ ಅನುವಾದಿಸಿದ್ದಾರೆ. ಯಜ್ಞ ಪಾಲನೆಗಾಗಿ ವಿಶ್ವಾಮಿತ್ರನೊಂದಿಗೆ ಹೊರಟ ರಾಮನು ನಂತರ ಮತ್ತೆ ಹಿಂದುರುಗಿ ಬಂದ ಪಟ್ಟಾಭಿಷೇಕ ಮಾಡಿಕೊಳ್ಳುವವರೆಗಿನ ಕಥೆಯು ಈ ನಾಟಕದ ವಸ್ತು. ಸೀಮಿತ ಸನ್ನಿವೇಶಗಳಲ್ಲಿ ಅಂದರೆ, ವಿಶ್ವಾಮಿತ್ರನ ಆಶ್ರಮ, ಪಂಚವಟಿ, ಲಂಕೆ ಮತ್ತು ಮರುಪ್ರಯಾಣದ ಆಕಾಶಮಾರ್ಗ ಹೀಗೆ ಕಥೆ ರೂಪುಗೊಂಡು ಕಥೆ ಮುಗಿಸುವ ಶೈಲಿಯಲ್ಲಿ ಸೃಜನಾತ್ಮಕತೆ ಇದೆ. ನಾಟಕದಲ್ಲಿ 7 ಅಂಕಗಳಿವೆ. ರಾಮಾಯಣದ ಹೊಸ ಬಗೆಯ ವ್ಯಾಖ್ಯಾನಗಳೂ ಇವೆ. ಸಂಸ್ಕೃತದಲ್ಲಿ ಕಾಣಿಸಿಕೊಂಡ ರಾಮಾಯಣದ ಹೊಸ ಬಗೆಯ ವ್ಯಾಖ್ಯಾನಗಳಿಗೆಲ್ಲ ಅಡಿಪಾಯ ಹಾಕಿಕೊಟ್ಟ ಕೃತಿ ಇದು ಎಂದು ಹೇಳಲಾಗುತ್ತದೆ. ಅಂದಿನ ನಾಟಕದ ವಸ್ತುವನ್ನು ಇಂದಿನ ರಂಗಕ್ಕೆ ಅಳವಡಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಕಾಣಬಹುದು.
©2024 Book Brahma Private Limited.