ಜನಪ್ರಿಯ ಶ್ರೀ ವಾಲ್ಮೀಕಿ ರಾಮಾಯಣ

Author : ಲಕ್ಷ್ಮೀನರಸಿಂಹಶಾಸ್ತ್ರಿ ಹುರಗಲವಾಡಿ

Pages 349

₹ 180.00




Year of Publication: 2016
Published by: ನವಭಾರತೀ ಪ್ರಕಾಶನ
Address: ಸರಸ್ವತಿಪುರಂ, ಮೈಸೂರು

Synopsys

ಹಿರಿಯ ಲೇಖಕ ಹುರಗಲವಾಡಿ ಲಕ್ಷ್ಮಿ ನರಸಿಂಹಶಾಸ್ತ್ರಿ ಅವರ ಕೃತಿ-ಜನಪ್ರಿಯ ಶ್ರೀ ವಾಲ್ಮೀಕಿ ರಾಮಾಯಣ. ರಾಮಾಯಣ ಕುರಿತು ಅಸಂಖ್ಯೆ ಕೃತಿಗಳು ಪ್ರಕಟವಾಗಿದ್ದು, ಮೂಲ ಕೃತಿಯಿಂದ ಅಲ್ಪಸ್ವಲ್ಪ ಬದಲಾವಣೆ ಆಗಿರುವುದನ್ನೂ ತಳ್ಳಿ ಹಾಕುವಂತಿಲ್ಲ. ಆದರೂ, ರಾಮಾಯಣದ ಸಾಹಿತ್ಯಕ ಸತ್ವ ಕಳೆಗುಂದಿಲ್ಲ, ಅದರ ಸಾಂಸ್ಕೃತಿಕ ಬೆಡಗಿಗೆ ಧಕ್ಕೆ ಬಂದಿಲ್ಲ. ಆದರ್ಶವನ್ನೇ ಹೇಳುವ ರಾಮಾಯಣವನ್ನು ತಮ್ಮ ವಿದ್ವತ್ ಪೂರ್ಣ ಪಾಂಡಿತ್ಯದೊಂದಿಗೆ ಲೇಖಕರು ಇಲ್ಲಿ ರಾಮಾಯಣವನ್ನು ಕಟ್ಟಿಕೊಟ್ಟಿದ್ದಾರೆ. .

About the Author

ಲಕ್ಷ್ಮೀನರಸಿಂಹಶಾಸ್ತ್ರಿ ಹುರಗಲವಾಡಿ
(12 May 1929)

ಲ.ನ.ಶಾಸ್ತ್ರಿ ಎಂತಲೇ ಪರಿಚಿತರಾಗಿರುವ ಕವಿ, ಕಾದಂಬರಿಕಾರ, ಧಾರ್ಮಿಕ ಸಾಹಿತ್ಯ ರಚನಕಾರರಾದ ಲಕ್ಷ್ಮೀನರಸಿಂಹಶಾಸ್ತ್ರಿ ಹುರಗಲವಾಡಿ ಅವರು ಜನಿಸಿದ್ದು 1929 ಮೇ 12ರಂದು. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿಮ ಹುರುಗಲವಾಡಿ ಇವರ ಹುಟ್ಟೂರು. ಮಂಡ್ಯದಲ್ಲಿಯೇ ಇಂಟರ್‌ ಮೀಡಿಯೇಟ್‌ ಶಿಕ್ಷಣ ಪಡೆದ ಇವರು ಅಂಚೆ ಇಲಾಖೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು.  ಇವರ ಪ್ರಮುಖ ಕೃತಿಗಳೆಂದರೆ ಪೂರ್ವರಾಗ (ಕವಿತಾಸಂಕಲನ), ರಸಾಗೌತಮಿ, ಊರ್ವಶಿ (ಕಥನಕವನಗಳು), ಮಾರೀಚ (ನಾಟಕ), ಧರೆಗಿಳಿದ ದಿವ್ಯತೇಜ (ಕಾದಂಬರಿ), ಶ್ರೀ ಜಗದ್ಗುರು (ಸಂಪಾದನೆ), ಸಂಭಾಷಣ ತರಂಗಿಣಿ, ಶ್ರೀ ಸಚ್ಚಿದಾನಂದ ಭಾರತಿ (ಜೀವನಚರಿತ್ರೆಗಳು), ಅಳಸಿಂಗ ಪೆರುಮಾಳ್ ಇತ್ಯಾದಿ. ...

READ MORE

Related Books