ಗುರು ನಮನ

Author : ಸಂತೋಷ್ ಬಿದರಗಡ್ಡೆ

Pages 132

₹ 130.00




Year of Publication: 2021
Published by: ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು

Synopsys

ಕಲಿಸುವಾತ ಶಿಕ್ಷಕನಾಗುತ್ತಾನೆ, ಅನುಭವದಿಂದ ಭೋಧಿಸುವಾತ ಗುರುವಾಗುತ್ತಾನೆ ಗುರು ಎಂದರೆ ವ್ಯಕ್ತಿಯಲ್ಲಿ ಒಂದು ಶಕ್ತಿ, ಅಜ್ಞಾನದ ಕತ್ತಲೆ ಕಳೆದು ಹೋಗುವ ಕಾವೇ ಗುರು ಗುರು ಹಿರಿಯರನ್ನು ಗೌರವಿಸುವ ಪರಂಪರೆ ನಮ್ಮದಾಗಬೇಕು ಎಂದು ಭಾವನೆಯಿಂದ ಗುರುಪೂರ್ಣಿಮೆ ನಿತ್ಯ ಕರ್ನಾಟಕ ರಾಜ್ಯ ಶಿಕ್ಷಕರ ಭಾಹಿತ ಸಾದತ್ತು ಜಿಲ್ಲಾ ಘಟಕ ಹಾವೇರಿ ವತಿಯಿಂದ ಗುರು ನಮನ'ದ ಮೂಲಕ ಆರ್ಶವಣವಾಗಿ ಪ್ರಸ್ತುತ ಸಮಾಜಕ್ಕೆ ಅನೇಕ ಶಿಕ್ಷಕ ಸಾಹಿತಿಗಳು ಮತ್ತು ಕವಿಗಳಿಂದ ಇದರ ವಿಚಾರಗಳನ್ನು ಮಂಡನೆ ಮಾಡಿದ್ದಾರೆ. ಈ ಗುರುನಮನ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ನಾನು ಭಾಗವಹಿಸಿದ್ದು ಸಂತಸ ತಂದಿದ್ದು, ಇದೀಗ ಅವರ ಸ್ಮರಣಾರ್ಥ ೨೦೨೧ ಸೆಪ್ಟೆಂಬರ್ ತಿಂಗಳು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರ ಜನ್ಮದಿನ ಶಿಕ್ಷಕರ ದಿನಾಚರಣೆ ಯ ಸುಸಂದರ್ಭದಲ್ಲಿ ಶಿಕ್ಷಕ, ಸಾಹಿತಿ ಸಂತೋಷ್ ಪದರಗಡ್ಡೆ ಹಾಗೂ ಬಿ. ಶಿವಕುಮಾ‌ ರವರ ಸಂಪಾದಕತ್ವದಲ್ಲಿ ನಾಡಿನ ನೂರೊಂದು ಕವಿಗಳ ನೂರೊಂದು "ಗುರು ನಮನ ಕವನ ಸಂಕಲನ ಲೋಕಾರ್ಪಣೆ ಗೊಳ್ಳುತ್ತಿರುವದು ಅತ್ಯಂತ ಮಹತ್ವದ್ದಾಗಿದೆ.

About the Author

ಸಂತೋಷ್ ಬಿದರಗಡ್ಡೆ
(20 May 1987)

ಸಂತೋಷ್ ಬಿದರಗಡ್ಡೆ ಪ್ರಸ್ತುತ ಐತಿಹಾಸಿಕ ತಾರಕೇಶ್ವರನ ನಾಡು, ಕುಮಾರೇಶ್ವರ ಮಹಾಸ್ವಾಮಿಗಳ ಭೂಮಿ ಹಾನಗಲ್ಲ ತಾಲೂಕಿನ ಪಂ.ಪುಟ್ಟರಾಜ ಗವಾಯಿಗಳ ಜನ್ಮಸ್ಥಳ ದೇವರ ಹೊಸಪೇಟೆಯಲ್ಲಿ  ಶಿಕ್ಷಕ ಸೇವೆಯಲ್ಲಿರುತ್ತಾರೆ.  ಪ್ರವೃತ್ತಿಯಲ್ಲಿ ಕತೆ, ಕವಿತೆ, ಲೇಖನ ಬರೆಯುವ ಯುವ ಸಾಹಿತಿಯಾಗಿದ್ದಾರೆ. ಅವರು ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಿದರಗಡ್ಡೆ  ಗ್ರಾಮದಲ್ಲಿ 1987, ಮೇ 20 ರಂದು ಜನಿಸಿದರು. ತಂದೆ ಪರಮೇಶ್ವರಪ್ಪಗೌಡ್ರು   ತಾಯಿ ಬಿ ಹೆಚ್ ದಾಕ್ಷಾಯಿಣಮ್ಮ 2005ನೇ ಇಸವಿಯಲ್ಲಿ ಚಾಲುಕ್ಯರ ರಾಜಧಾನಿ ಬಾದಾಮಿ ತಾಲೂಕಿನಲ್ಲಿ ಶಿಕ್ಷಕವೃತ್ತಿ ಪ್ರಾರಂಭಿಸಿದ ಇವರು  ಹಾನಗಲ್ಲ ತಾಲೂಕಿನಲ್ಲಿ ಸೇವೆಗೈಯುತ್ತಿದ್ದಾರೆ. "ಬಿದರಗಡ್ಡೆ ಮಲ್ಲಿಕಾರ್ಜುನ" ಕಾವ್ಯನಾಮದಲ್ಲಿ ಆಧುನಿಕ ವಚನಗಳನ್ನು, ಸಾವಿರಾರು ಕವಿತೆಗಳನ್ನು ಬರೆದಿರುತ್ತಾರೆ. ಇವರ ...

READ MORE

Related Books