ಫೀದ್ರಾ

Author : ಮಾಧವ ಚಿಪ್ಪಳಿ

Pages 140

₹ 180.00




Year of Publication: 2020
Published by: ಮಣಿಪಾಲ್ ಯ್ಯೂನಿವರ್ಸಲ್ ಪ್ರೆಸ್
Address: 5ನೇ ಹಂತ, ಅಡ್ವೈಸ್ ರೀಸರ್ಚ್ ಸೆಂಟರ್, ಮಾಧವ ನಗರ, ಮಣಿಪಾಲ- 576104
Phone: 8202922954

Synopsys

‘ಫೀದ್ರಾ’ ಪಾಶ್ಚಿಮಾತ್ಯ ನಾಟಕಕಾರ ಜಾನ್ ರಾಸೀನ್ ಅವರ ನಾಟಕದ ಕನ್ನಡಾನುವಾದ. ಲೇಖಕ, ಅನುವಾದಕ ಮಾಧವ ಚಿಪ್ಪಳಿ ಅವರು ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಗ್ರೀಕ್ ಪುರಾಣದ ಪ್ರಸಿದ್ಧ ಕಥಾನಕವೊಂದನ್ನು ಆಧರಿಸಿ ‘ಫೀದ್ರಾ’ ನಾಟಕವನ್ನು ಜಾನ್ ರಾಸೀನ್ 1677ರಲ್ಲಿ ಬರೆದರು. ಫ್ರೆಂಚ್ ಭಾಷೆಯ ಈ ನಾಟಕವು ಹಲವು ಬಾರಿ ಇಂಗ್ಲೀಷಿಗೆ ಅನುವಾದವಾದಗೊಂಡಿದೆ. ಅಲ್ಲದೇ ಕಳೆದ ಹಲವು ದಶಕಗಳಿಂದಲೂ ಕನ್ನಡ ವಿದ್ವಾಂಸರ, ವಿಮರ್ಶಕರ ಮನ್ನಣೆಗೆ ಪಾತ್ರವಾಗಿರುವ ‘ಫೀದ್ರಾ’ ನಾಟಕದ ಮೊದಲ ಕನ್ನಡ ಅನುವಾದ ಇದಾಗಿದೆ. ಈ ಅನುವಾದವು ನೀನಾಸಮ್ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಂದ ಪ್ರದರ್ಶಿತಗೊಂಡು ರಂಗಪ್ರಯೋಗವಾಗಿಯೂ ಯಶಸ್ವಿಯಾಗಿದೆ.

About the Author

ಮಾಧವ ಚಿಪ್ಪಳಿ

ಲೇಖಕ, ಅನುವಾದಕ ಮಾಧವ ಚಿಪ್ಪಳಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಚಿಪ್ಪಳಿಯವರು. ಸಾಗರದ ಲಾಲ್‍ಬಹಾದೂರ್ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಪಡೆದಿರುವ ಅವರು ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಎಂ.ಎ., ಜೊತೆಗೆ ಮಣಿಪಾಲ ವಿಶ್ವವಿದ್ಯಾಲಯದಿಂದ ಭಾಷಾತತ್ತ್ವಶಾಸ್ತ್ರ ಮತ್ತು ಭಾಷಾಂತರ ಅಧ್ಯಯನದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಅವರು ಬರೆದ ಭಾಷೆ-ತತ್ತ್ವ-ಕವಿತೆಗಳ ಕುರಿತ ಪ್ರಬಂಧಗಳ ಸಂಕಲನ ‘ನುಡಿಯೊಡಲು,’ ಅನುವಾದಿಸಿರುವ ‘ಆರು ಟಾಲ್‍ಸ್ಟಾಯ್ ಕತೆಗಳು’ ಮತ್ತು ಜಿಯಾವುದ್ದೀನ್ ಸರ್ದಾರರ ‘ಸ್ವರ್ಗ ಸಾಧನೆಯ ಉತ್ಕಟ ಬಯಕೆ: ಸಂದೇಹಿ ಮುಸ್ಲಿಮನ ಯಾತ್ರೆಗಳು’ ಈಗಾಗಲೇ ಪ್ರಕಟಗೊಂಡಿವೆ. ಅವರ ‘ಆರು ಟಾಲ್‍ಸ್ಟಾಯ್ ಕತೆಗಳು’ ಪುಸ್ತಕಕ್ಕೆ ...

READ MORE

Related Books