ಈಡಿಪಸ್ ಮತ್ತು ಅಂತಿಗೊನೆ

Author : ಪಿ. ಲಂಕೇಶ್

Pages 138

₹ 10.00




Year of Publication: 1972
Published by: ಅಕ್ಷರ ಪ್ರಕಾಶನ

Synopsys

ಸೋಫೋಕ್ಲಿಸ್ ಮಹಾಕವಿಯ ದೊರೆ ಈಡಿಪಸ್ ಮತ್ತು ಅಂತಿಗೊನೆ ಎಂಬ ನಾಟಕಗಳ ಕನ್ನಡ ಅವತರಣಿಕೆ.  ಪಿ. ಲಂಕೇಶ್ ಅವರ ಕೃತಿಯಾಗಿದೆ. 'ದೊರೆ ಈಡಿಪಸ್' ನನ್ನ ಪ್ರಕಾರ ವಿನ್ಯಾಸ ಮತ್ತು ನಾಟಕತ್ವದ ದೃಷ್ಟಿಯಿಂದ ಜಗತ್ತಿನ ಅತ್ಯುತ್ತಮ ನಾಟಕ. ಎಲ್ಲ ದೃಷ್ಟಿಯಿಂದ ಅತ್ಯುತ್ತಮ ಎಂದು ಅರಿಸ್ಟಾಟಲ್ ಕೂಡ ಹೇಳಿರುವುದನ್ನು ಪಾಶ್ಚಿಮಾತ್ಯ ರಂಗಭೂಮಿ ಬಲ್ಲವರಿಗೆ ಜ್ಞಾಪಿಸಬೇಕಿಲ್ಲ ಎಂದು ಲಂಕೇಶ್ ಅವರು ಬರೆದಿದ್ದಾರೆ.

About the Author

ಪಿ. ಲಂಕೇಶ್
(08 March 1935 - 25 January 2000)

ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್‌ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ...

READ MORE

Related Books