ಸಾಫೋಕ್ಲಿಸ್ ಮಹಾಕವಿಯ ದೊರೆ ಈಡಿಪಸ್ ಹಾಗೂ ಅಂತಿಗೊನೆ -ಈ ಎರಡೂ ನಾಟಕಗಳ ಕನ್ನಡಾನುವಾದ ಮಾಡಿದ್ದು ಪಿ. ಲಂಕೇಶ್. ಈ ಎರಡೂ ನಾಟಕಗಳು ವಿನ್ಯಾಸ ಹಾಗೂ ನಾಟಕತ್ವದ ದೃಷ್ಟಿಯಿಂದ ಪ್ರೇಕ್ಷಕರ ಮನ ಸೆಳೆದಿವೆ. ದೊರೆ ಈಡಿಪಸ್ ವಿಸ್ಮಯಭರಿತ ನಾಟಕ. ಮನುಷ್ಯ ಶೋಧದ ಚಿತ್ರಣವಿದೆ. ದ್ವಂದ್ವಗಳನ್ನು ಕೂಡಿಸಿ ನಾಟಕಗಳನ್ನು ಕಟ್ಟುವಲ್ಲಿ ಸಾಫೋಕ್ಲಿಸ್ ನಿಪುಣ. ವ್ಯಕ್ತಿ -ವ್ಯಕ್ತಿ ಮಾತ್ರವಲ್ಲ; ವ್ಯಕ್ತಿ ಮತ್ತು ಆತನ ಅಂತರಂಗದ ವೈರುಧ್ಯಗಳನ್ನು ತೋರುವಲ್ಲಿಯೂ ಈ ಎರಡೂ ನಾಟಕಗಳು ಯಶಸ್ವಿಯಾಗಿವೆ. ಮನುಷ್ಯನ ಮಿತಿ ಹಾಗೂ ವೈರುಧ್ಯಗಳ ವಿಸ್ತಾರವಾದ ಚಿತ್ರಣವನ್ನು ಸಾಫೋಕ್ಲಿಸ್ ತೋರಿದ್ದಾನೆ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.