ಡೆಸ್ಡಿ ಮೋನಾಳ ಕರವಸ್ತ್ರ

Author : ವಿಕ್ರಮ ವಿಸಾಜಿ

Pages 72

₹ 80.00




Year of Publication: 2022
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ವ್ಹಯಾ ಎಮ್ಮಿಗನೂರು, ಬಳ್ಳಾರಿ - 583113
Phone: 9480353507

Synopsys

ಇಲ್ಲಿನ ಕವಿತೆಗಳಲ್ಲಿ ಕವಿಯ ಲೋಕಾನುಭವದ ಕಥನಗಳ ಸಂವಾದವಿದೆ, ತನ್ನ ಸುತ್ತಲ ಲೋಕದ ಓದನ್ನು ಧ್ಯಾನವಾಗಿಸಿದ ಕವಿ ಇಲ್ಲಿ ಅಕ್ಷರವಾಗಿದ್ದಾರೆ. ಗಾಲಿಬ್‌ನ ಸಾಮರಸ್ಯದ ಹಂಬಲಗಳು; ಪಣಿರರ ಅವಿಶ್ರಾಂತ ಓದಿನ ಚಿಂತನಶೀಲ ತುಡಿತಗಳು, ಮುರುಗನ್‌ರ ಪ್ರತಿರೋಧದ ನಿಟ್ಟುಸಿರು; ಡೆಸ್ಲಿಮೋನಾಳ ಕರವಸ್ತ್ರದಲ್ಲಡಗಿರುವ ಹೆಣ್ಣಿನ ಸಂಕಟಗಳು; ಬೀದಿ ಬದಿಯ ಹರಳಯ್ಯರ ಉರಿಚಮ್ಮಾವುಗೆಯಲ್ಲಿ ಗಾಯಗೊಂಡ ಚರಿತ್ರೆಗಳು; ಜಂಗಮ ಜೈನ ಮುನಿಯ ದಣಿವರಿಯದ ಪಯಣದ ಹೆಜ್ಜೆ ಗುರುತುಗಳು; ಶೋಕಗೀತೆಯಲ್ಲಿ ಕವಿ ಮಿತ್ರನ ಅಗಣಿತ ತುಮುಲಗಳು; ನೋವಿನ ನಿಗೂಢತೆಯ ಸಂಕೇತವಾದ ಶಾಣಮ್ಮ, ಮಾಸ್ತಿಕಲ್ಲು, ನದಿ, ಸಮುದ್ರ, ಹಕ್ಕಿ, ಗೂಡು, ಜೈಲು, ದುಂಬಿ, ಚಿಟ್ಟೆ, ಜೇನು, ಶಬ್ದ, ಕನಸು ಇತ್ಯಾದಿಗಳು ಇಲ್ಲಿ ಕಾವ್ಯವಾಗಿವೆ. ಮನುಷ್ಯ ಲೋಕದ ಅಂತರಂಗದ ಮೌನಕ್ಕೆ ಮಾತಾಗಲು ಬಯಸುವ ಇಲ್ಲಿನ ಕವಿತೆಗಳಿಗೆ ಮುಖವಾಡತನವನ್ನು ಕಳಚುತ್ತಲೇ ಲೋಕದ ಸುಳ್ಳು-ಸತ್ಯಗಳನ್ನು ಬಯಲಾಗಿಸುವ ಕಣೋಟವಿದೆ. ರಾತ್ರಿ, ಹಗಲುಗಳ ನಿಸರ್ಗವು ಇಲ್ಲಿ ಮತ್ತೆ ಮತ್ತೆ ಸಂವಾದಕ್ಕಿಳಿಯುತ್ತಲೇ ಕಾವ್ಯದ ನಿಜದ ನೆಲೆಯನ್ನು ಸಾಕಾರಗೊಳಿಸಲು ತವಕಿಸುತ್ತದೆ. ಕಾವ್ಯ ಕಟ್ಟುತ್ತಲೇ ಕಾವ್ಯಕಾರಣವನ್ನು ಹುಡುಕುವ ಕವಿಯ ಕಾವ್ಯಶೋಧನೆಯ ಪರಿ ವಿಸ್ಮಯ ಉಂಟುಮಡುತ್ತದೆ ಎಂದು ಡಾ. ಅಪ್ಪಗೆರೆ ಸೋಮಶೇಖರ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ವಿಕ್ರಮ ವಿಸಾಜಿ

ಕಲಬುರ್ಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾಗಿರುವ ವಿಕ್ರಮ ವಿಸಾಜಿ ಅವರು ಕವಿ-ವಿಮರ್ಶಕ. ಬೀದರ ಜಿಲ್ಲೆಯ ಭಾಲ್ಕಿಯವರಾದ ವಿಕ್ರಮ ಅವರ ತಂದೆ ಹೆಸರಾಂತ ಕವಿ-ಲೇಖಕರು. ಬಾಲ್ಯದಲ್ಲಿಯೇ ಕವಿತೆ ಬರೆಯುವುದನ್ನು ಆರಂಭಿಸಿದ ವಿಕ್ರಮ ಅವರು ಹೈಸ್ಕೂಲಿನಲ್ಲಿದ್ದಾಗಲೇ ಕವನ ಸಂಕಲನ ಪ್ರಕಟಿಸಿದ್ದರು.  ಕಲಬುರ್ಗಿಯ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎ) ಪದವಿ ಪಡೆದ ಅವರು ಕಂಬಾರರ ಕಾವ್ಯದ ಮೇಲೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಪದವಿ ಪಡೆದಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ ಸೊಂಡೂರು, ರಾಯಚೂರು ಸ್ನಾತಕೋತ್ತರ ಕೇಂದ್ರಗಳಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು.  ಕನ್ನಡ ಸಾಹಿತ್ಯ ಪರಿಷತ್ತು ...

READ MORE

Related Books