ಬೇಸಾಯ ಕೇವಲ ಉತ್ತುವ- ಬಿತ್ತುವ ಕಾರ್ಯವಲ್ಲ ಅದೊಂದು ಸಂಸ್ಕೃತಿ ಮತ್ತು ಜ್ಞಾನಧಾರೆ. ಇಂತಹ ಜ್ಞಾನವಲಯದಲ್ಲಿ ಬಳಕೆಯಾಗುವ ಪದಪುಂಜಗಳು ಸಂಕೀರ್ಣವೂ, ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವೂ ಆಗಿರುತ್ತವೆ. ಅಲ್ಲದೆ ತಲೆಮಾರಿನಿಂದ ತಲೆಮಾರಿಗೆ ಅರ್ಥ-ವ್ಯತ್ಯಾಸಗಳು ಉಂಟಾಗುತ್ತಿರುತ್ತವೆ, ಒಮ್ಮೊಮ್ಮೆ ವಿಸ್ಮೃತಿಗೂ ಒಳಗಾಗುವ ಅಪಾಯವಿದೆ.
ಇದನ್ನೆಲ್ಲಾ ಗಮನಿಸಿ ಬೇಸಾಯಶಾಸ್ತ್ರಕ್ಕೆ ಸಂಬಂಧಿಸಿದ ಪಾರಿಭಾಷಿಕ ಪದಗಳನ್ನು ತಂದಿದೆ ಬೆಂಗಳೂರು ವಿಶ್ವವಿದ್ಯಾಲಯದ ಕೃಷಿ ವಿಭಾಗ. ಎಚ್.ಕೆ. ನರಸಿಂಹೇಗೌಡ, ಸಿ.ಕೆ. ಕುಮುದಿನಿ ಹಾಗೂ ಉಷಾಕಿರಣ್ ಅವರ ಆಸಕ್ತಿಯ ಫಲವಾಗಿ ನಿಘಂಟು ಮೂಡಿಬಂದಿದೆ. ಕೃಷಿಕರು, ಕೃಷಿ ವಿಜ್ಞಾನಿಗಳು, ವಿದ್ಯಾರ್ಥಿಗಳು, ಸಂಶೋಧಕರು, ಬೋಧಕರು, ಭಾಷಾಶಾಸ್ತ್ರಜ್ಞರು, ಸಾಹಿತ್ಯವಲಯ ಹೀಗೆ ಅನೇಕ ಆಸಕ್ತರಿಗೆ ಉಪಯುಕ್ತವಾಗಬಲ್ಲ ಶಬ್ದಕೋಶ ಇದು.
©2024 Book Brahma Private Limited.